ಪಂಚ ರಾಜ್ಯ ಚುನಾವಣೆ ಮತ ಎಣಿಕೆಗೆ ಕೇವಲ ಒಂದು ದಿನ ಇರುವಾಗ ಉತ್ತರ ಪ್ರದೇಶದಲ್ಲಿ ಅನಪೇಕ್ಷಿತ ಘಟನೆಗಳು ವರದಿ ಆಗ ತೊಡಗಿವೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ಮಾತನಾಡಿ , EVM ಟ್ಯಾಪೆರಿಂಗ್ ನಡೆಸಲಾಗುತ್ತಿದೆ. ವಾರಾಣಸಿಯ ಮತ ಎಣಿಕೆ ಕೇಂದ್ರದಿಂದ ಬಿಜೆಪಿ ಯವರು ಮತ ಯಂತ್ರಗಳನ್ನು ಕದಿಯುತ್ತಿದ್ದಾರೆ. ಇದಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಸಾಥ್ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಈ ಆರೋಪಕ್ಕೆ ಪೂರಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ EVM ಒಳಗೊಂಡಿರುವ ವಾಹನಗಳು, ಅವನ್ನು ತಡೆದಿರುವ ಜನ, ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕುತ್ತಿರುವುದು ಕಂಡು ಬರುತ್ತಿದೆ. ಸೋಲುತ್ತಿರುವ ಬಿಜೆಪಿ ಅಧಿಕಾರ ಹಿಡಿಯಲು ಈ ಅಡ್ಡದಾರಿ ಹಿಡಿದಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂಬ ಟೀಕೆಗಳು ಕೇಳಿ ಬರುತ್ತಿವೆ.

ಈ ಬೆನ್ನಲ್ಲೇ ವಾರಣಾಸಿ ಜಿಲ್ಲಾಧಿಕಾರಿ ಮಾತನಾಡಿ, ಈಗ ಪತ್ತೆ ಆಗಿರುವ 20 ಎವಿಎಂಗಳನ್ನು ಚುನಾವಣೆಗೆ ಬಳಸಿಲ್ಲ. ಅವುಗಳನ್ನು ಬುಧವಾರದ ತರಬೇತಿಗೆ ತೆಗೆದುಕೊಂಡು ಬರಲಾಗಿತ್ತು. ಚುನಾವಣ ಸಿಬ್ಬಂದಿ ಖಾಲಿ ಬಾಕ್ಸ್ ತರುತ್ತಿದ್ದರು. ಜನ ಆ ವಾಹನ ತಡೆದು ಪರಿಶೀಲಿಸಿದ್ದಾರೆ. ಸ್ಟ್ರಾಂಗ್ ರೂಮ್ ಪರಿಶೀಲಿಸಿದ್ದಾರೆ. ಎಲ್ಲಿಯೂ ಏನು ಯಡವಟ್ಟು ಆಗಿಲ್ಲ. ಎಲ್ಲಾ EVM ಸುರಕ್ಷಿತವಾಗಿವೆ. ಪ್ರತಿಭಟನೆ ನಡೆಸಿದವರು ಸಮಾಧಾನ ಗೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ, ಕೆಲ ರಾಜಕೀಯ ಪಕ್ಷಗಳು, ವದಂತಿ ಹಬ್ಬಿಸುತ್ತಿವೆ ಎಂದು ದೂರಿದ್ದಾರೆ.ಕೆಲವರು ಇಂಥಾದ್ದೆ ಎರಡು ಮೂರು ವಾಹನ ಹೋಗಿವೆ ಅಂತಿದ್ದಾರೆ. ಅಂತಾದ್ದೆನಿಲ್ಲ. ಯಾರು ಬೇಕಿದ್ದರೂ CCTV ಚೆಕ್ ಮಾಡಬಹುದು. ಎಲ್ಲಾ ಸ್ಟ್ರಾಂಗ್ ರೂಮ್ ಸೀಲ್ ಮಾಡಿದ್ದು, CRPF ಭದ್ರತೆ ಒದಗಿಸಲಾಗಿದೆ, ಸಿಸಿಟಿವಿ ನಿಗಾ ಇದೆ. ಎಲ್ಲಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅವುಗಳನ್ನು ಗಮನಿಸುತ್ತಾ ಇದ್ದಾರೆ ಎಂದು ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಎಂದು ಹೇಳಿಕೆ ನೀಡಿದ್ದಾರೆ.
ಯಾವುದೇ EVM ಗಳನ್ನು ಸ್ಟ್ರಾಂಗ್ ರೂಮ್ ನಿಂದ ಬೇರೆಡೆಗೆ ಸಾಗಿಸಿಲ್ಲ. ಇದು ಇಲ್ಲಿಗೆ ಬಿಟ್ಟು ಬಿಡಿ. ವಿವಾದ ಮಾಡಬೇಡಿ ಎಂದು ವಾರಣಾಸಿ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ಕೊರಿದ್ದಾರೆ.
ಬರೇಲಿ ಜಿಲ್ಲೆಯಲ್ಲೂ ಇಂಥಾದ್ದೆ ಘಟನೆಗಳು ವರದಿ ಆಗಿವೆ. ಸ್ವತಃ ಬರೇಲಿ ಜಿಲ್ಲಾಧಿಕಾರಿಗಳೇ ಕೆಲವೊಂದು ತಪ್ಪು ಆಗಿವೆ ಎಂದಿದ್ದಾರೆ. ಆದರೆ, EVM ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಘಟನೆಗೆ ಅಖಿಲೇಶ್ ಯಾದವ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಅನುಮಾನಾಸ್ಪದ ಚಟುವಟಿಕೆ ನಡೆದಿಲ್ಲ ಎನ್ನುವುದಾದರೆ, EVM ತುಂಬಿದ ಎರಡು ವಾಹನ ಹೇಗೆ ಹೋದವು ಎಂದು ಪ್ರಶ್ನೆ ಮಾಡಿದ್ದಾರೆ. ಅಭ್ಯರ್ಥಿಗಳು ಇಲ್ಲದೆ ಎಲ್ಲಿಗೂ EVM ಸಾಗಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿಗಳು, ಎಲ್ಲಾ DM ಗಳಿಗೆ ಕರೆ ಮಾಡಿ, ಬಿಜೆಪಿ ಎಲ್ಲಿ ಸೋಲುವ ಸಾಧ್ಯತೆ ಇದೆಯೋ ಅಲ್ಲೆಲ್ಲ ಮತ ಎಣಿಕೆ ನಿಧಾನಗತಿಯಲ್ಲಿ ಸಾಗಲಿ ಎಂದು ಸೂಚನೆ ನೀಡಿದ್ದಾರೆ ಎಂಬ ಮಾಹಿತಿ ಇದೆ ಎಂದಿರುವ ಅಖಿಲೇಶ್ ಸಿಂಗ್ ಯಾದವ್, ಈಗ EVM ಇರುವ ವಾಹನಗಳೇ ಸಿಕ್ಕಿಬಿದ್ದಿರೋದನ್ನು ನೋಡಿದರೆ, ಅಧಿಕಾರಿಗಳು ತಪ್ಪುಗಳ ಮೇಲೆ ತಪ್ಪು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ವಾರಣಾಸಿ ಘಟನೆಯಿಂದ ಕೂಡಲೇ ಎಲ್ಲಾ ವಿಧಾನಸಭೆಗಳ ಅಭ್ಯರ್ಥಿಗಳು, ಕಾರ್ಯಕರ್ತರು ಅಲರ್ಟ್ ಆಗಿ ಕ್ಯಾಮೆರಗಳ ಜೊತೆ ಸ್ಟ್ರಾಂಗ್ ರೂಮ್ ಕಾಯಿರಿ. ಮತ ಎಣಿಕೆ ವೇಳೆ ಅಕ್ರಮ ತಡೆಯಿರಿ.. ಯುವಕರು ಪ್ರಜಾಪ್ರಭುತ್ವದ ಸೈನಿಕರಾಗಿ ಎಂದು ಅಖಿಲೇಶ್ ಸಿಂಗ್ ಯಾದವ್ ಕರೆ ನೀಡಿದ್ದಾರೆ.
ಸುಹೇಲ್ ದೇವ್ ಭಾರತೀಯ ಸಮಾಜ ಪಕ್ಷದ ಓಂ ಪ್ರಕಾಶ್ ರಾಜ್ ಭರ್ ಮಾತನಾಡಿ, DM ನೀಡಿದ ವಿವರಣೆ ನಂಬಲು ಆಗುತ್ತಿಲ್ಲ ಎಂದಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕೂಡಲೇ ಕ್ರಮ ಆಗಬೇಕು ಎಂದು ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ವಾರಣಾಸಿಯಲ್ಲಿ EVM ಪತ್ತೆ ಪ್ರಕರಣ ಸಂಬಂಧ ಇವತ್ತು ಹೈಕೋರ್ಟ್ ಮೊರೆ ಹೋಗಲು ಸಮಾಜವಾದಿ ಪಕ್ಷ ತೀರ್ಮಾನಿಸಿದೆ.
ಗುರುವಾರ ಮತ ಎಣಿಕೆ ನಡೆಯಲಿದೆ. ಎಲ್ಲಾ ಎಕ್ಸಿಟ್ ಪೋಲ್ ಗಳು ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ. ಆದರೆ, ಸಮಾಜವಾದಿ ಪಕ್ಷ ಮಾತ್ರ ಗೆಲ್ಲುತ್ತೇವೆ.. ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ.