RRR ರಿಲೀಸ್ಗೂ ಮೊದ್ಲೇ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಶ್ರಿಯಾ ಶರಣ್ ನಟಿಸಲಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಗೆ ಶ್ರಿಯಾ ಶರಣ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ.
ಟಾಲಿವುಡ್ , ಕಾಲಿವುಡ್ ಟಾಪ್ ಸೂಪರ್ ಸ್ಟಾರ್ ಗಳ ಜತೆ ನಟಿಸಿ ಬಹುಭಾಷೆಯಲ್ಲಿ ನಾಯಕಿಯಾಗಿ ಆಳಿ, ಬಾಲಿವುಡ್ ನಲ್ಲಿ ಮತ್ತೆ ಚಾರ್ಮಿಂಗ್ ಇನ್ನಿಂಗ್ಸ್ ಶುರು ಮಾಡಿರೋ ಶ್ರಿಯಾ, ಇದೀಗ ವರ್ಷಗಳ ನಂತರ ಮತ್ತೆ ಕನ್ನಡದಲ್ಲಿ ಹಲ್ ಚಲ್ ಎಬ್ಬಿಸೋದಕ್ಕೆ ಬಂದಿದ್ದಾರೆ.
ಅರಸು ಹಾಗೂ ಚಂದ್ರ ಚಿತ್ರಗಳ ಗ್ಯಾಪ್ ನಂತ್ರ ಶ್ರಿಯಾ ದೊಡ್ಡ ಪಾತ್ರದೊಂದಿಗೆ ಕನ್ನಡದ ಅತಿದೊಡ್ಡ ಸಿನಿಮಾದೊಂದಿಗೆ ಭರ್ಜರಿಯಾಗಿ ಕಂಬ್ಯಾಕ್ ಆಗಿದ್ದಾರೆ.
ಕಬ್ಜದಲ್ಲಿ ಇಬ್ಬರು ರಾಣಿಯರು ಒಬ್ಬರು ಇವತ್ತು ರಿವೀಲ್ ಅದ್ರೆ, ಮತ್ತೊಬ್ಬರು ಅತಿ ಶೀಘ್ರದಲ್ಲೇ ಆಗಲಿದ್ದಾರೆ. ಅದ್ರಂತೆ ಇಬ್ಬರಲ್ಲಿ ಒಬ್ಬರಾಗಿರೋ ಶ್ರೀಯಾ ಅವ್ರ ಪಾತ್ರ ಈಗ ರಿಲೀಲ್ ಆಗಿದ್ದು, ರೆಟ್ರೋ ಸ್ಟೈಲ್ ಪ್ಯಾನ್ ಇಂಡಿಯಾ ಚಿತ್ರದಲ್ಲಿ ಶ್ರಿಯಾ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.
ಆರ್.ಚಂದ್ರು ನಿರ್ದೇಶನದಲ್ಲಿ ಈ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಕಥೆ ಹಾಗೂ ಮೇಕಿಂಗ್ ವಿಚಾರವಾಗಿ ಈ ಚಿತ್ರ ಇಡೀ ದೇಶದ ಗಮನ ಸೆಳೆದಿದೆ. ವಿಶೇಷವಾಗಿ ತೆಲುಗು ನೆಲದಲ್ಲಿ ಹಾಗೂ ಮುಂಬೈ ಮಾರ್ಕೆಟ್ ನಲ್ಲಿ ಕಬ್ಜ ವಿಚಾರ ಹಾಟ್ ಟಾಪಿಕ್ ಆಗಿದೆ.
ಈಗಾಗ್ಲೇ ಪ್ಯಾನ್ ಇಂಡಿಯಾ ತುಂಬೆಲ್ಲಾ ನಿರೀಕ್ಷೆ ಹುಟ್ಟಿಸಿರೋ ಭರವಸೆ ಹೆಚ್ಚಿಸೊರೋ ಕಬ್ಜ ಕೊನೆಯ ಭಾಗದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ಅಂದ್ಹಾಗೆ ಇಷ್ಟರಲ್ಲೇ ನಿರ್ದೇಶಕ ಆರ್.ಚಂದ್ರು ಚಿತ್ರದ ಮತ್ತೊಂದು ರಾಣಿಯನ್ನ ಪರಿಚಯಿಸಲಿದ್ದು, ಅವ್ರು ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಅನ್ನೋದು ವಿಶೇಷ.