ಕಬ್ಬು ಕಿತ್ತುಕೊಳ್ಳಲು ಹೋಗಿದ್ದ ಬಾಲಕನೋರ್ವ ಟ್ರ್ಯಾಕ್ಟರ್ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಬೈಲಹೊಂಗಲ ತಾಲೂಕಿನ ಅಮಟೂರು ಗ್ರಾಮದಲ್ಲಿ ಮೊನ್ನೆ ಸಂಜೆ ನಡೆದಿದೆ.
ಮೃತ ಬಾಲಕನನ್ನು ಅನಿಲ್ ಹಣಬರ್ (8) ಎಂದು ಗುರುತಿಸಲಾಗಿದೆ. ಅನಿಲ್ ಕಬ್ಬು ಕಿತ್ತುಕೊಳ್ಳಲೆಂದು ಕಬ್ಬು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ನ ಹಿಂದೆ ಓಡಿದ್ದಾನೆ. ಈ ವೇಳೆ ಆಯತಪ್ಪಿ ಬಿದ್ದು ಟ್ರ್ಯಾಕ್ಟರ್ನ ಚಕ್ರಕ್ಕೆ ಸಿಲುಕಿದ್ದಾನೆ. ಆತ ರಕ್ತದ ಮಡುವಿನಲ್ಲಿ ನಡು ರಸ್ತೆಯಲ್ಲೇ ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗ್ರಾಮೀಣ ಪ್ರದೇಶದಲ್ಲಿ ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಹಿಂದೆ ಮಕ್ಕಳು ಓಡುವುದು ಸರ್ವೇ ಸಮಾನ್ಯವಾದಂತೆ ಆಗಿಬಿಟ್ಟಿದೆ. ಮಕ್ಕಳ ಸುರಕ್ಷತೆಯ ದೃಷ್ಠಿಯಿಂದ, ಮಕ್ಕಳು ಕಬ್ಬಿನ ಗಾಡಿಯ ಹಿಂದೆ ಓಡದಂತೆ ಪೋಷಕರು ಇನ್ನಾದರೂ ತಡೆಯಬೇಕಿದೆ.