ಗೃಹಜ್ಯೋತಿ ಯೋಜನೆ ಸಂಬಂಧ ಇಂಧನ ಸಚಿವ ಕೆ ಜೆ ಜಾರ್ಜ್ ಅವರು ಬೆಂಗಳೂರಲ್ಲಿ ವಿವರವಾದ ಮಾಹಿತಿ ನೀಡಿದ್ದಾರೆ.
ಬಾಡಿಗೆದಾರರಿಗೂ ಗೃಹ ಜ್ಯೋತಿ ಲಭ್ಯ:
ಆಧಾರ್ ಕಾರ್ಡ್ ಸಂಖ್ಯೆಯನ್ನು ಆರ್ಆರ್ ನಂಬರ್ಗೆ ಲಿಂಕ್ ಮಾಡ್ಬೇಕು. ಬಾಡಿಗೆದಾರರಾಗಿದ್ದರೆ ಬಾಡಿಗೆ ಕರಾರುಪತ್ರವನ್ನೂ ಅಪ್ಲೋಡ್ ಮಾಡ್ಬೇಕಾಗುತ್ತದೆ. ಒಂದು ವೇಳೆ ಬಾಡಿಗೆಕರಾರರು ಪತ್ರ ಇಲ್ಲದೇ ಹೋದಲ್ಲಿ ವೋಟರ್ ಐಡಿಯನ್ನು ಆರ್ಆರ್ ನಂಬರ್ಗೆ ಜೋಡಿಸಬೇಕಾಗುತ್ತದೆ.
ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಸಿಗುತ್ತದೆ. ಜೂನ್ 15ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಮೂರು ಲೆಕ್ಕ:
1. ಮಾಸಿಕ ಸರಾಸರಿ+ಹೆಚ್ಚುವರಿ ಶೇಕಡಾ 10ರಷ್ಟು ಯುನಿಟ್ನ್ನಷ್ಟು ವಿದ್ಯುತ್ನ್ನು ಬಳಸಿದರೆ ವಿದ್ಯುತ್ ಶುಲ್ಕ ಪಾವತಿಸಬೇಕಿಲ್ಲ. ಈ ಯೋಜನೆಯಲ್ಲಿ ವಿದ್ಯುತ್ ಬಳಕೆಯ ಜೊತೆಗೆ ಇತರೆ ತೆರಿಗೆಯಾಗಲೀ ಅಥವಾ ನಿಗದಿತ ಶುಲ್ಕ ಕೊಡಬೇಕಾಗಿಲ್ಲ.
ಉದಾಹರಣೆ: 2022ರ ಏಪ್ರಿಲ್ 1ರಿಂದ ಈ ವರ್ಷದ ಮಾರ್ಚ್ 30ರವರೆಗೆ ಮಾಸಿಕ ಸರಾಸರಿ ವಿದ್ಯುತ್ ಬಳಕೆ 90 ಯುನಿಟ್. ಹೆಚ್ಚುವರಿ ಶೇಕಡಾ 10ರಷ್ಟು ಯುನಿಟ್ ಬಳಕೆಗೆ ಅವಕಾಶ. ಅಂದರೆ 90+9 ಅಂದರೆ 99 ಯುನಿಟ್ ಸಂಪೂರ್ಣ ಉಚಿತ.
2. ಮಾಸಿಕ ಸರಾಸರಿ +ಹೆಚ್ಚುವರಿ ಶೇಕಡಾ 10ರಷ್ಟು ಯುನಿಟ್ನ್ನೂ ಮೀರಿ 200 ಯುನಿಟ್ವರೆಗೆ ವಿದ್ಯುತ್ ಬಳಸಿದರೆ ಆಗ ಮೀರಿ ಬಳಸಿದ ವಿದ್ಯುತ್ಗಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಹೆಚ್ಚುವರಿ ಮಿತಿಯನ್ನೂ ಮೀರಿ ವಿದ್ಯುತ್ ಬಳಸಿದರೆ ಆಗ ಶುಲ್ಕದ ತೆರಿಗೆ ಮತ್ತು ಫಿಕ್ಸೆಡ್ ಜಾರ್ಜ್ ನೀಡಬೇಕಾಗುತ್ತದೆ.
ಉದಾಹರಣೆ: ಮಾಸಿಕ ಸರಾಸರಿ ವಿದ್ಯುತ್ ಬಳಕೆ 90 ಯುನಿಟ್. ಹೆಚ್ಚುವರಿ ಶೇಕಡಾ 10ರಷ್ಟು ಯುನಿಟ್ ಬಳಕೆಗೆ ಅವಕಾಶ. ಅಂದರೆ 90+9 ಅಂದರೆ 99 ಯುನಿಟ್.
ಒಂದು ವೇಳೆ 99 ಯುನಿಟ್ಗಿಂತ ಹೆಚ್ಚು 200 ಯುನಿಟ್ ಒಳಗೆ ಉದಾಹರಣೆಗೆ 135 ಯುನಿಟ್ವರೆಗೆ ಬಳಸಿದರೆ ಆಗ 99-135= 36 ಯುನಿಟ್ಗಷ್ಟೇ ಶುಲ್ಕ ಪಾವತಿಸಬೇಕಾಗುತ್ತದೆ.
3. ಒಂದು ವೇಳೆ 200 ಯುನಿಟ್ಗಿಂತ ಮೇಲ್ಪಟ್ಟು ವಿದ್ಯುತ್ ಬಳಸಿದರೆ ಆಗ ಸಂಪೂರ್ಣ 200 ಯುನಿಟ್ಗೂ ವಿದ್ಯುತ್ ಶುಲ್ಕ ಪಾವತಿಸಬೇಕಾಗುತ್ತದೆ.
ADVERTISEMENT
ADVERTISEMENT