ಗೋವಾದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಎಕ್ಸಿಟ್ ಪೋಲ್ ತಿಳಿಸಿದ ಬೆನ್ನಲ್ಲೇ ಕಾಂಗ್ರೆಸ್ – ಬಿಜೆಪಿ ನಡುವೆ ಪವರ್ ಗೇಮ್ ಶುರುವಾಗಿದೆ.
ಕಳೆದ ಬಾರಿಯಂತೆ ಅಧಿಕಾರ ಕೈಜಾರಬಾರದು ಎಂದು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ಕಾಂಗ್ರೆಸ್ ಹೈಕಮಾಂಡ್ ಚಿದಂಬರಂ, ಡಿಕೆ ಶಿವಕುಮಾರ್ ಗೆ ಗೋವಾ ಹೊಣೆ ವಹಿಸಿದೆ.
ಈ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ರೆಸಾರ್ಟ್ ಗೆ ಶಿಫ್ಟ್ ಮಾಡಲಾಗಿದೆ. ನಾಳೆ ಮಧ್ಯಾಹ್ನದವರೆಗೂ ಎಲ್ಲರನ್ನು ಜೊತೆಯಲ್ಲಿ ಇರಿಸಿಕೊಳ್ಳಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
ಅಲ್ಲದೆ, ಎಂಜಿಪಿ + ಟಿಎಂಸಿ, AAP ಜೊತೆ ಮೈತ್ರಿಗೆ ಕಾಂಗ್ರೆಸ್ ಪ್ರಯತ್ನಗಳನ್ನು ನಡೆಸಿದೆ.
ಅವಕಾಶ ಸಿಕ್ಕಿದರೆ ಗೋವಾ ಸಿಎಂ ಸ್ಥಾನಕ್ಕೇರಲು ಟಿಎಂಸಿ ಹವಣಿಸುತ್ತಿದೆ.
ಮತ್ತೊಂದು ಕಡೆ ಬಿಜೆಪಿಯೂ ಸುಮ್ಮನೆ ಇಲ್ಲ. ನಿನ್ನೆ ದೆಹಲಿಯಲ್ಲಿ ಗೋವಾ ಸಿಎಂ ಪ್ರಮೋದ್ ಸಾವಂತ್, ಪ್ರಧಾನಿ ಜೊತೆ ಮಾತುಕತೆ ನಡೆಸಿದ್ದಾರೆ.
ಇಂದು ಮುಂಬೈಗೆ ತೆರಲಿರುವ ಅವರು, ಗೋವಾ ಇಂಚಾರ್ಜ್ ದೇವೇಂದ್ರ ಫಾಡ್ನವಿಸ್ ಜೊತೆ ಸಭೆ ನಡೆಸಲಿದ್ದಾರೆ. ಸರ್ಕಾರ ರಚನೆಗೆ ಇರುವ ಅವಕಾಶಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಅಗತ್ಯ ಬಿದ್ದರೆ, ಎಂಜಿಪಿ ಬೆಂಬಲ ಪಡೆಯಲು ಚಿಂತನೆ ನಡೆಸಿದೆ. ಆದರೆ, ಸದ್ಯ ಎಂಜಿಪಿ, ಟಿಎಂಸಿ ಜೊತೆ ಕೈಜೋಡಿಸಿದೆ. ಹೀಗಾಗಿ ಎಂಜಿಪಿ ನಡೆ ಕುತೂಹಲ ಕೆರಳಿಸಿದೆ.