ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರ ಮಗ ಝೈನ್ ನಾಡೆಲ್ಲಾ ( 26) ಅವರು ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅಂಗವೈಕಲ್ಯದಿಂದ ಬಳಲುತ್ತಾ, ಈ ನಡುವೆಯೂ ಅಂಗವಿಕಲರಿಗಾಗಿ ವಿವಿಧ ಸಾಫ್ಟ್ ವೇರ್ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿದ್ದಂತ ಮೈಕೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ನಾಡೆಲ್ಲಾ ಸೋಮವಾರ ನಿಧನರಾಗಿದ್ದಾರೆ.
2014 ರಲ್ಲಿ ಸಿಇಒ ಪಾತ್ರವನ್ನು ವಹಿಸಿಕೊಂಡಾಗಿನಿಂದ, ನಾಡೆಲ್ಲಾ ಅವರು ಅಂಗವೈಕಲ್ಯಹೊಂದಿರುವ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸುವತ್ತ ಕಂಪನಿಯನ್ನು ಕೇಂದ್ರೀಕರಿಸಿದ್ದರು.
ಕಳೆದ ವರ್ಷ, ಝೈನ್ ಹೆಚ್ಚಿನ ಚಿಕಿತ್ಸೆಯ ಬಳಿಕ, ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್ ನ ಭಾಗವಾಗಿ, ಪೀಡಿಯಾಟ್ರಿಕ್ ನ್ಯೂರೋಸೈನ್ಸ್ ನಲ್ಲಿ ಎಗ್ಯುಂಟೆಡ್ ಚೇರ್ ಅನ್ನು ಅಭಿವೃದ್ಧಿ ಪಡಿಸಿದ್ದರು.