ತುಳು ರಂಗಭೂಮಿ ಹಾಗೂ ಚಲನಚಿತ್ರ ರಂಗದ ಜನಪ್ರಿಯ ನಟರಾದ ಭೋಜರಾಜ್ ವಾಮಂಜೂರು ಅವರು ಮಂಗಳೂರಿನಲ್ಲಿ ಯುಗಲ ಮುನಿವರ್ಯರ ಆಶಿರ್ವಾದ ಪಡೆದರು.
ತುಳು ರಂಗಭೂಮಿಯ ಹಾಗೂ ಚಲನಚಿತ್ರ ರಂಗದ ಜನಪ್ರಿಯ ನಟರಾದ ಭೋಜರಾಜ್ ವಾಮಂಜೂರು ಹಾಗೂ ವಾಣಿ ಬಿ ವಾಮಂಜೂರು ರವರು ಸೋಮವಾರ ಮಂಗಳೂರು ನಗರದಲ್ಲಿ ಸನಾತನ ಪರಂಪರೆಯ ತ್ಯಾಗದ ಉತ್ತುಂಗ ಶ್ರೇಣಿಯಲ್ಲಿರುವ ಜೈನ ದಿಗಂಬರ ಸಾಧುಗಳಾದ ಯುಗಲ ಮುನಿಗಳೆಂದೇ ಪ್ರಸಿದ್ದಿ ಪಡೆದ ಪರಮ ಪೂಜ್ಯ ಮುನಿಶ್ರೀ 108 ಅಮೋಘಕೀರ್ತಿ ಮುನಿ ಮಹಾರಾಜ್ ಮತ್ತು ಪರಮ ಪೂಜ್ಯ ಮುನಿಶ್ರೀ 108 ಅಮರಕೀರ್ತಿ ಮುನಿ ಮಹಾರಾಜ್ ರವರ ದರ್ಶನ ಪಡೆದರು.
ಯುಗಳ ಮುನಿವರ್ಯರು ಭೋಜರಾಜ್ ವಾಮಂಜೂರು ಅವರಿಗೆ ತಮ್ಮ ಕಲಾ ಕ್ಷೇತ್ರದಲ್ಲಿ ಇನ್ನಷ್ಟು ಸೇವೆ ಸಲ್ಲಿಸಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಂಗಳೂರಿನ ಸಮಸ್ತ ಜೈನ ಸಮಾಜ ಬಾಂಧವರು ಉಪಸ್ಥಿತರಿದ್ದರು.