ಬಿಜೆಪಿ ತನ್ನ ಅಸ್ತಿತ್ವಕ್ಕಾಗಿ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದೀಗ, ಡಿಕೆ ಶಿವಕುಮಾರ್ ಅವರ ವಿರುದ್ಧ ಸಂಘ ಪರಿವಾರದ ಹೀನ ನಾಲಿಗೆ ಹರಿಬಿಟ್ಟಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಬಿಜೆಪಿಯ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಗುರುವಾರ ಇಡಿಯು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶಿಟ್ ಸಲ್ಲಿಕೆ ಮಾಡಿದೆ. ಈ ಬೆನ್ನಲ್ಲೇ, ಬಿಜೆಪಿಯ ಹಲವು ನಾಯಕರು ಡಿಕೆ ಶಿವಕುಮಾರ್ ಅವರ ಬಗ್ಗೆ ಮಾತನಾಡಿದ್ದರು.
ಇದೀಗ, ಬಿಜೆಪಿಯವರ ಮಾತಿಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರು, ಈ ದೇಶದ ತನಿಖಾ ಸಂಸ್ಥೆಗಳ ತನ್ನ ರಾಜಕೀಯ ಅಸ್ತಿತ್ವಕ್ಕಾಗಿ ಬಳಸಿಕೊಳ್ಳುತ್ತಿರುವ ಬಿಜೆಪಿ, ಸೇಡಿನ ರಾಜಕಾರಣ ಮಾಡಲು ED ಮುಖಾಂತರ ಆರೋಪ ಪಟ್ಟಿ ದಾಖಲಿಸಲಾಗಿದೆ. ಈ ದೇಶದಲ್ಲಿ ಇನ್ನೂ ನ್ಯಾಯಾಂಗ ವ್ಯವಸ್ಥೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದು ದಿನೇ ದಿನೇ ಬಿಜೆಪಿ ಬೆತ್ತಲೆ ಆಗುತ್ತಿದೆ
ಡಿಕೆ ಶಿವಕುಮಾರ್ ಅವರ ವೈಯಕ್ತಿಕ ಬದುಕಿನ ಮೇಲೆ ಮಾತನಾಡಿ ಬಿಜೆಪಿ ಮತ್ತು ಸಂಘ ಪರಿವಾರದ ಹೀನ ನಾಲಿಗೆ ಹರಿಬಿಟ್ಟಿದ್ದಾರೆ. ಶಿವಕುಮಾರ್ ಟೀಕೆ ಮಾಡಿ ರಾಜಕೀಯ ಅಸ್ತಿತ್ವ ಕಂಡು ಕೊಳ್ಳಲು ಪ್ರಯತ್ನ ಮಾಡುತ್ತಿರುವ ಅಬ್ಬೆಪಾರಿಗಳು ಮೊದಲು ಸಾರ್ವಜನಿಕ ಜೀವನದಲ್ಲಿ ಕೊಡುವ ಹೇಳಿಕೆಗಳು ಬಿಜೆಪಿ ಕಲಿಸಿಕೊಟ್ಟ ಸಂಸ್ಕೃತಿ ಎಂದು ಹೇಳಲಿ!
ಗಾಂಧಿ ಕೊಲೆ ಮಾಡಿದ ಆರೋಪ ಇರುವ, encounter ಆರೋಪದಲ್ಲಿ ಜೈಲು ಕಂಡ, ಕೋಮು ಗಲಭೆಯಲ್ಲಿ ರಾಜಕೀಯ ಅಸ್ತಿತ್ವ ಕಾಣುತ್ತಿರುವ ಅಬ್ಬೆ ಪಾರಿಗಳು ಕೆಪಿಸಿಸಿ ಅಧ್ಯಕ್ಷರನ್ನ ಅಥವಾ ಕಾಂಗ್ರೆಸ್ ಪಕ್ಷವನ್ನು ಇಂತಹ ಕೆಳಮಟ್ಟದ ಟೀಕೆ ಇಂದ ಅಳಿಸಲು ಸಾಧ್ಯವಿಲ್ಲ. ED ಬಳಕೆಯ ಬಿಜೆಪಿ ಆಟಕ್ಕೆ ನಮ್ಮ ಧಿಕ್ಕಾರ ಎಂದು ರಮೇಶ್ ಬಾಬು ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.