ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳ ಇದರ ಶಿಕ್ಷಕರಿಗೆ ರುಡ್ಸೆಟ್ ಸಂಸ್ಥೆಯಲ್ಲಿ ಚೇತೋಹಾರಿ ಚಟುವಟಿಕೆಗಳ ಕಾರ್ಯಾಗಾರವನ್ನು ಇಂದು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರದ ಉದ್ಘಾಟಕರಾಗಿ ಮಾತನಾಡಿದ ರುಡ್ಸೆಟ್ ಸಂಸ್ಥೆಯ ಅಧ್ಯಕ್ಷರಾಗಿರುವ ಶ್ರೀಯುತ ಸುರೇಶ್ ಅವರು, ಕೇವಲ ತನ್ನ ಶಾಲೆ ಮಾತ್ರವಲ್ಲದೆ ಇತರೆ ಸಂಸ್ಥೆಗಳನ್ನು ಶಿಕ್ಷಕರು ಅರಿತಿರಬೇಕು. ಅದೂ ಸಹ ಒಂದು ಮನಸ್ಸಿನ ಭಾರವನ್ನು ಕೆಳಗಿಳಿಸುವ ಸಾಧನ. ಬದಲಾದ ವಾತಾವರಣ ಮತ್ತೆ ಕೆಲಸದತ್ತ ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ. ಮನಸ್ಸಿನ ಏಕಾಗ್ರತೆಯನ್ನು ಸಹ ಹೆಚ್ಚಿಸುತ್ತದೆ ಎಂದರು.
ರುಡ್ಸೆಟ್ ಸಂಸ್ಥೆಯು ಹಲವಾರು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುತ್ತಿದ್ದು ಶಿಕ್ಷಕರಿಗೂ ಕಾರ್ಯಾಗಾರವನ್ನು ಏರ್ಪಡಿಸಿದ್ದು ಬಹಳ ಹೆಮ್ಮೆಯ ವಿಚಾರವೇ ಸರಿ. ಕೇವಲ ಪಾಠ ಬೋಧನೆ ಚಟುವಟಿಕೆ ಹೀಗೆ ತಮ್ಮದೇ ಆದ ಪ್ರಪಂಚದಲ್ಲಿ ಇರುವ ಶಿಕ್ಷಕರಿಗೆ ಇದೊಂದು ಮನಸ್ಸಿಗೆ ಮುದನೀಡುವ ಹಾಗೂ ಮಕ್ಕಳಂತೆ ಬೆರೆಯುವ ಬಾಲ್ಯವನ್ನು ನೆನಪಿಸುವ ಮನಸ್ಸಿನ ಭಾರವನ್ನು ಕೆಳಗಿಳಿಸುವ ಒಂದು ಉತ್ತಮ ಕಾರ್ಯಗಾರ ಇಲ್ಲಿ ಕಲಿತಂತಹ ಅಂಶಗಳನ್ನು ತಮ್ಮ ತರಗತಿಯಲ್ಲಿ ಅಳವಡಿಸಿಕೊಂಡರೆ ವಿದ್ಯಾರ್ಥಿಗಳು ಸಹ ಸಂತೋಷಗೊಳ್ಳುತ್ತಾರೆ ಎಂದು ಅಬ್ರಹಾಂ ಜೇಮ್ಸ್ ನುಡಿದರು.
ಆ ನಂತರ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂವಿ. ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹಿಡಿದಿಟ್ಟುಕೊಳ್ಳುವ ಒಂದು ತಂತ್ರವೆಂದರೆ ಅದು ಕ್ರಿಯಾಶೀಲ ಚಟುವಟಿಕೆಗಳು ಇಂತಹ ಕ್ರಿಯಾಶೀಲ ಚಟುವಟಿಕೆಗಳನ್ನು ಅರಿಯಲು ಅವಕಾಶ ಮಾಡಿಕೊಟ್ಟ ರುಡ್ಸೆಟ್ ಸಂಸ್ಥೆಯ ಸಿಬ್ಬಂದಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ತದನಂತರ ಶ್ರೀಮತಿ ಅನುಸೂಯ ಶಿಕ್ಷಕರಿಗೆ ಅನೇಕ ರೀತಿಯ ಚೇತೋಹಾರಿ ಚಟುವಟಿಕೆಗಳನ್ನು ಆಡಿಸುವ ಮುಖಾಂತರ ತಿಳಿಸಿಕೊಟ್ಟರು. ಒಟ್ಟಿನಲ್ಲಿ ಇದೊಂದು ಉತ್ತಮ ಕಾರ್ಯಾಗಾರ ವಾಗಿದ್ದು ಇದರ ಸದುಪಯೋಗವನ್ನು ಶಿಕ್ಷಕರು ಪಡೆದುಕೊಂಡರು.