ಖಾಸಗಿ ವಲಯದ ವಿದ್ಯುತ್ ಕಂಪನಿ ಏಸಾರ್ ಪವರ್ ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ನಡುವಿನ ವಿದ್ಯುತ್ ಸಂಪರ್ಕ ಮಾರ್ಗವನ್ನು ಅದಾನಿ ಕಂಪನಿಗೆ ಮಾರಾಟ ಮಾಡಿದೆ.
ಮಧ್ಯಪ್ರದೇಶದಲ್ಲಿರುವ ಮಹನ್ ಪವರ್ ಸ್ಟೇಷನ್ ಮತ್ತು ಛತ್ತೀಸ್ಗಢದಲ್ಲಿರುವ ಸಿಪಾತ್ ಉಪ ಕೇಂದ್ರ ನಡುವಿನ 465 ಕಿಲೋ ಮೀಟರ್ ದೂರದ 400 ಕೆವಿ ಸಾಮರ್ಥ್ಯದ ಅಂತರ್ರಾಜ್ಯ ವಿದ್ಯುತ್ ಮಾರ್ಗವನ್ನು ಅದಾನಿ ಕಂಪನಿಗೆ ಮಾರಿದೆ.
ಈ ವ್ಯವಹಾರದ ಮೊತ್ತ 1,912 ಕೋಟಿ ರೂಪಾಯಿ. ಮಧ್ಯ ಭಾರತದಲ್ಲಿ 20 ಸಾವಿರ ಕಿಲೋ ಮೀಟರ್ ವಿದ್ಯುತ್ ಮಾರ್ಗವನ್ನು ಹೊಂದುವ ಗುರಿಯನ್ನು ಅದಾನಿ ಕಂಪನಿ ಹೊಂದಿದೆ. ಸದ್ಯ ಅದಾನಿ ಒಡೆತನದಲ್ಲಿ 19,468 ಕಿಲೋ ಮೀಟರ್ ವೀಸ್ತೀರ್ಣದ ವಿದ್ಯುತ್ ಸಂಪರ್ಕ ಮಾರ್ಗವಿದೆ.