ಬಹುಕೋಟಿ ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದಲ್ಲಿ ಮಾಜಿ ರಕ್ಷಣಾ ಕಾರ್ಯದರ್ಶಿ ಶಶಿ ಕಾಂತ್ ಶರ್ಮಾ ಹಾಗೂ ನಾಲ್ವರು ಭಾರತೀಯ ವಾಯುಪಡೆ ಸಿಬ್ಬಂದಿಗಳ ವಿರುದ್ಧ ಸಿಬಿಐ ಪೂರಕ ಚಾರ್ಜ್ ಶೀಟ್ ದಾಖಲಿಸಿದೆ.
2011-13 ರ ಅವಧಿಯಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಶರ್ಮ ಅವರ ವಿರುದ್ಧ ತನಿಖೆ ನಡೆಸಲು ಸರ್ಕಾರದಿಂದ ಅನುಮತಿ ಪಡೆದ ಬಳಿಕ ಸಿಬಿಐ ಚಾರ್ಜ್ ಶೀಟ್ ದಾಖಲಿಸಿದೆ.
ವಾಯುಪಡೆಯ ಏರ್ ವೈಸ್ ಮಾರ್ಷಲ್ ಜಸ್ಬೀರ್ ಸಿಂಗ್ ಪನೇಸರ್ (ನಿವೃತ್ತ) ಟೆಸ್ಟ್ ಪೈಲಟ್ ವಿಭಾಗದ ಉಪ ಮುಖ್ಯಸ್ಥರಾದ ಎಸ್ಎ ಕುಂತೆ, ಆಗಿನ ವಿಂಗ್ ಕಮಾಂಡರ್ ಥಾಮಸ್ ಮ್ಯಾಥ್ಯೂ ಹಾಗೂ ಗ್ರೂಪ್ ಕ್ಯಾಪ್ಟನ್ ಎನ್ ಸಂತೋಷ್ ಅವರ ಹೆಸರನ್ನೂ ಸಿಬಿಐ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.
12 ವಿವಿಐಪಿ ಹೆಲಿಕಾಫ್ಟರ್ ಗಳನ್ನು ಅಗಸ್ಟಾ ವೆಸ್ಟ್ ಲ್ಯಾಂಡ್ ನಿಂದ ಖರೀದಿಸುವುದರಲ್ಲಿ ಹಗರಣ ನಡೆದಿತ್ತು.
https://youtu.be/7R_IfHf4X3A