ಯುದ್ಧ ಪೀಡಿತ ಉಕ್ರೇನ್ನಿಂದ ರೊಮೇನಿಯಾಕ್ಕೆ ಸ್ಥಳಾಂತರಗೊಂಡಿದ್ದ 250 ಮಂದಿಯನ್ನು ಭಾರತಕ್ಕೆ ಕರೆತರಲಾಯಿತು.
‘ಆಪರೇಷನ್ ಗಂಗಾ’ದ ಎರಡನೇ ಹಂತದಲ್ಲಿ ರೊಮೇನಿಯಾದ ರಾಜಧಾನಿ ಬುಕಾರೆಸ್ಟ್ನಿಂದ 250 ಮಂದಿ ಭಾನುವಾರ ಮುಂಜಾನೆ ನವದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
250 ಮಂದಿ ಭಾರತೀಯರನ್ನೊಳಗೊಂಡ ವಿಮಾನ ಬುಕಾರೆಸ್ಟ್ನಿಂದ ಟೇಕಾಫ್ ಆಗಿದೆ ಎಂದು ಶನಿವಾರ ತಡರಾತ್ರಿ ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿದ್ದರು.
The second evacuation flight from Romanian capital Bucharest carrying 250 Indian nationals who were stranded in Ukraine landed at the Delhi airport in the early hours of Sunday. #OperationGanga pic.twitter.com/vjKHRqsYF7
— ANI (@ANI) February 26, 2022
ಮೊದಲ ಹಂತದ ತೆರವು ಕಾರ್ಯಾಚರಣೆಯಲ್ಲಿ 219 ಮಂದಿಯನ್ನು ಶನಿವಾರ ತಾಯ್ನಾಡಿಗೆ ಕರೆತರಲಾಗಿತ್ತು. ಬುಕಾರೆಸ್ಟ್ನಿಂದ 219 ಭಾರತೀಯರನ್ನು ಹೊತ್ತ ಏರ್ ಇಂಡಿಯಾ ವಿಮಾನವು ಶನಿವಾರ ಸಂಜೆ ಮುಂಬೈಗೆ ಬಂದಿಳಿದಿತ್ತು.