ಉಕ್ರೇನ್ಮೇಳಿನ ರಷ್ಯಾ ದಾಳಿಯಲ್ಲಿ ಉಕ್ರೇನ್ನ ಖಾರ್ಕಿವ್ ನಗರದಲ್ಲಿದ್ದ ಕನ್ನಡಿಗ ನವೀನ್ ಮೃತರಾಗಿದ್ದಾರೆ. ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್ ನಿವಾಸದಲ್ಲಿ ನವೀನ್ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಮೃತ ನವೀನ್ ತಂದೆ ಶೇಖರಗೌಡ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಲ್ಲಿನ ರಾಜಕೀಯ, ರಿಸರ್ವೇಷನ್, ಶಿಕ್ಷಣ ಪದ್ಧತಿ ಸರಿ ಇಲ್ಲದ ಕಾರಣ ನಮ್ಮ ಮಗ ಇಲ್ಲಿ ಓದಲು ಆಗಲಿಲ್ಲ ಎಂದು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಉಕ್ರೇನ್ನಲ್ಲಿ ಇನ್ನೂ ಸಾವಿರಾರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿದ್ಯಾರ್ಥಿಗಳು ಬಂಕರ್ನಲ್ಲಿ ಇದ್ದರೂ ಕಷ್ಟ, ಹೊರಗೆ ಬಂದರು ಕಷ್ಟ ಅಂತಾ ಒದ್ದಾಡುತ್ತಿದ್ದಾರೆ. ಯುದ್ಧ ಆಗೋದು ಸುಳ್ಳು, ಧೈರ್ಯವಾಗಿರಿ ಅಂತ ಕಾಲೇಜಿನವರು ಹೇಳಿದ್ದರಂತೆ. ಎಲ್ಲರೂ ಯುದ್ಧ ಆಗಲ್ಲ ಎನ್ನುವ ವಿಶ್ವಾಸದಲ್ಲಿ ಇದ್ದರು ಎಂದು ಭಾವುಕರಾಗಿದ್ದಾರೆ.
https://youtu.be/nuMQ4R7w7z8