ಇಂದು ಭಾನುವಾರ ಜಪಾನಿನ ಬಿಲಿಯನೇರ್ ‘ಹಿರೋಶಿ ಮಿಕಿ ಮಿಕಿತಾನಿ’ ಅವರು ಉಕ್ರೇನ್ ಸರ್ಕಾರಕ್ಕೆ ಬರೋಬ್ಬರಿ $ 8.7 ಮಿಲಿಯನ್ ( 64.95 ಕೋ.ರೂ) ದೇಣಿಗೆ ನೀಡುವುದಾಗಿ ಹೇಳಿದ್ದಾರೆ. ರಷ್ಯಾದ ಆಕ್ರಮಣವನ್ನು ಪ್ರಜಾಪ್ರಭುತ್ವಕ್ಕೆ ಸವಾಲು ಎಂದು ಕರೆದಿದ್ದಾರೆ.
ಜಪಾನ್ನ ಈ ಕಾಮರ್ಸ್ ದೈತ್ಯ ಕಂಪೆನಿ ‘ರಾಕುಟೆನ್ನ’ ಸಂಸ್ಥಾಪಕರಾದ ಹಿರೋಶಿ ಮಕಿ ಮಿಕಿತಾನಿಯವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ಝೆಲೆನ್ಸ್ಕಿಯವರಿಗೆ ಪತ್ರ ಬರೆದು ಉಕ್ರೇನ್ನಲ್ಲಿ ಹೀಮಸಾಚಾರಕ್ಕೆ ಬಲಿಯಾದ ಜನರಿಗೆ ಸಹಾಯ ಮಾಡಲು ಹಾಗೂ ಮಾನವೀಯ ಚಟುವಟಿಕೆಗಳಿಗಾಗಿ 8.7 ಮಿಲಿಯನ್ ಡಾಲರ್ ಹಣದ ನೆರವು ನೀಡುವುದಾಗಿ ತಿಳಿಸಿದ್ದಾರೆ.
2019 ರಲ್ಲಿ ಉಕ್ರೇನ್ ಅಧ್ಯಕ್ಷ ಹಾಗೂ ಮಿಕಿತಾನಿಯವರು ಪರಸ್ಪರ ಭೇಡಿಯಾಗಿದ್ದರು. “ನನ್ನ ಆಲೋಚನೆಗಳು ನಿಮ್ಮೊಂದಿಗೆ ಮತ್ತು ಉಕ್ರೇನ್ ಜನರೊಂದಿಗೆ ಇವೆ” ಎಂದು ಮಿಕಿಟಾನಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಶಾಂತಿಯುತ ಮತ್ತು ಪ್ರಜಾಸತ್ತಾತ್ಮಕ ಉಕ್ರೇನ್ ಅನ್ನು ನ್ಯಾಯಸಮ್ಮತವಲ್ಲದ ಬಲದಿಂದ ತುಳಿಯುವುದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ರಷ್ಯಾ ಮತ್ತು ಉಕ್ರೇನ್ ಈ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಬೇಕು. ಉಕ್ರೇನ್ ಜನರು ಆದಷ್ಟು ಬೇಗ ಶಾಂತಿಯನ್ನು ಹೊಂದಬೇಕು ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ಜಪಾನಿನ ಸರ್ಕಾರವು ಮಾಸ್ಕೋದಲ್ಲಿ ಸ್ವತ್ತುಗಳನ್ನು ನಗದೀಕರಿಸುವುದು ಮತ್ತು ರಷ್ಯಾದ ಮಿಲಿಟರಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಬಿಡಿಭಾಗಗಳನ್ನು ರಫ್ತಿಗೆ ನಿಷೇಧಿಸುವುದು ಸೇರಿದಂತೆ ಹಲವು ನಿರ್ಬಂಧಗಳನ್ನು ಘೋಷಿಸಿದೆ.