ಬೆಂಗಳೂರು: ಬಿಗ್ ಬಾಸ್ ನಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಪ್ರಶಾಂತ್ ಸಂಬರ್ಗಿ ನಿಂದನೆ ಮಾಡಿದ್ದು, ಈ ಬಗ್ಗೆ ಕ್ಷಮೆ ಕೇಳಿದ್ದಾರೆ.
ಯಾವ ಹೋರಾಟಗಾರರನ್ನು ಹೇಗೆ ಹತ್ತಿಕ್ಕಬೇಕು, ನೋಡಿಕೊಳ್ಳಬೇಕು ಎಂದು ನನಗೆ ಗೊತ್ತಿದೆ. ಎಷ್ಟೋ ಜನರನ್ನು ಮೂಲೆಗುಂಪು ಮಾಡಿದ್ದೇನೆ ಎನ್ನುವ ಅರ್ಥದಲ್ಲಿ ಪ್ರಶಾಂತ್ ಸಂಬರ್ಗಿ ಟೀಕಿಸಿದ್ದರು. ಸಂಬರ್ಗಿ ಅವರ ಈ ಮಾತು ಕನ್ನಡಪರ ಹೋರಾಟಗಾರರನ್ನು ಕೆರಳಿಸಿತ್ತು.
ಹೀಗಾಗಿಯೇ ಅನೇಕರು ವಾಹಿನಿಯ ಮುಂದೆ ಮತ್ತು ಬಿಗ್ ಬಾಸ್ ಶೂಟಿಂಗ್ ನಡೆಯುವ ಸ್ಥಳಕ್ಕೂ ಹೋಗಿ ಪ್ರತಿಭಟನೆ ಮಾಡಿದ್ದರು. ಹೋರಾಟಗಾರರ ಪ್ರತಿಭಟನೆ ತಾರಕಕ್ಕೇರುತ್ತಿದ್ದಂತೆಯೇ ವಾಹಿನಿ ಕೂಡ ಎಚ್ಚೆತ್ತುಕೊಂಡಿದೆ. ಹೀಗಾಗಿಯೇ ಸಂಬರ್ಗಿ ಕ್ಷಮೆ ಕೇಳಿದ್ದಾರೆ.
ನಾನು ಆ ರೀತಿಯಲ್ಲಿ ಮಾತನಾಡಿಲ್ಲ, ಯಾರಿಗೂ ಅವಮಾನಿಸಿಲ್ಲ, ನನ್ನನ್ನು ಕ್ಷಮಿಸಿ. ಆಡಿದ ಅಷ್ಟೂ ಮಾತುಗಳನ್ನು ನಾನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.