ಕರ್ನಾಟಕ ಪಶುಸಂಗೋಪನಾ ಮಂಡಳಿಯ ಬ್ರಾಂಡ್ ಅಂಬಾಸಿಡರ್ ಆಗಿ ನಟ ಕಿಚ್ಚ ಸುದೀಪ್ ಆಯ್ಕೆಯಾಗಿದ್ದಾರೆ.
ಸುದೀಪ್ ಅವರ ಈ ವರ್ಷದ ಹುಟ್ಟುಹಬ್ಬಕ್ಕೆ ಕಿಚ್ಚನಿಗೆ ಸಿಕ್ಕ ಉಡುಗೊರೆ ಇದಾಗಿದೆ. ಕರ್ನಾಟಕ ಪಶುಸಂಗೋಪನಾ ಇಲಾಖೆಯು ಪುಣ್ಯಕೋಟಿ ದತ್ತು ಯೋಜನೆ ಕಾರ್ಯಕ್ರಮದ ಬ್ರಾಂಡ್ ಅಂಬಾಸಿಡರ್ ಆಗಿ ಕಿಚ್ಚ ಸುದೀಪ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ 11.000 ರೂಪಾಯಿ ಪಾವತಿಸಿ ಹಸುವನ್ನು ದತ್ತು ಪಡೆಯುವ ಯೋಜನೆ ಇದಾಗಿದ್ದು. ಈ ಪುಣ್ಯಕೋಟಿ ದತ್ತು ಯೋಜನೆಯನ್ನು ರಾಜ್ಯಾದ್ಯಂತ ಪಸರಿಸುವ ಕಾರ್ಯದಲ್ಲಿ ಸುದೀಪ್ ಪಶುಸಂಗೋಪನಾ ಇಲಾಖೆಯ ಜೊತೆ ಕೈ ಜೋಡಿಸಲಿದ್ದಾರೆ.
ಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಮಾಡಲಾದ ನಮ್ಮ ಇಲಾಖೆಯ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಚುರಪಡಿಸಲು & ಉತ್ತೇಜಿಸಲು ನಟ, ನಿರ್ದೇಶಕ ಅಭಿನಯ ಚಕ್ರವರ್ತಿ @KicchaSudeep ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತೇನೆ.(1/3) pic.twitter.com/syOOXUA4oX
— Prabhu Bhamla Chavan (@PrabhuChavanBJP) September 2, 2022
ಸದ್ಯ ಸುದೀಪ್ ಅವರು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬ್ಯುಸಿ ಇರುವುದರಿಂದ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿಕ್ರಾಂತ್ ರೋಣಾ ಚಿತ್ರದಲ್ಲಿ ಅವರು ಕಡೆಯ ಬಾರಿ ಕಾಣಿಸಿಕೊಂಡಿದ್ದು ಮುಂದಿನ ಸಿನಿಮಾ ಕುರಿತು ಅವರಿಂದ ಯಾವ ಮಾಹಿತಿಯೂ ಈ ವರೆಗೆ ಲಭ್ಯವಿಲ್ಲ. ಬಿಗ್ ಬಾಸ್ ಮುಗಿದ ಮೇಲಷ್ಟೇ ಈ ಎಲ್ಲಾ ಮಾಹಿತಿಗೂ ಕಿಚ್ಚನಿಂದ ಉತ್ತರ ದೊರೆಯಬಹುದು. ಕಾದು ನೋಡಬೇಕಾಗಿದೆ.
-ಸತ್ಯಸಾಕ್ಷಿ ತುಮರಿ