ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ಕ್ಯಾಪ್ಟನ್ ಆಗಿದ್ದ ಶ್ರೇಯಸ್ ಆಯ್ಯರ್ ಅವರನ್ನು ಇತ್ತೀಚೆಗೆ ನಡೆದ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಖರೀದಿಸಿತ್ತು. ಇದೀಗ ಅವರನ್ನೇ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿ ಕೆಕೆಆರ್ ಪ್ರಾಂಚೈಸಿಯ ನಿರ್ದೇಶಕರು ಘೋಷಣೆ ಮಾಡಿದ್ದಾರೆ.
ಹರಾಜಿನಲ್ಲಿ ಶ್ರೇಯಸ್ ಅಯ್ಯರ್ ಖರೀದಿಗೆ ಬಹುತೇಕ ಪ್ರಾಂಚೈಸಿಗಳು ಪೈಪೋಟಿ ನಡೆಸದವು. ಆದರೆ, ಪಟ್ಟು ಬಿಡದ ಕೇಕೆಆರ್ ತಂಡ ಇವರನ್ನು ಬರೋಬ್ಬರಿ 12.5 ಕೋಟಿ ರೂ.ಗಳಿಗೆ ಖರೀದಿಸಿತ್ತು. ಈ ಪ್ರಾಂಚೈಸಿಯು ಬಾಲಿವುಡ್ ನಟ ಶಾರುಖ್ ಖಾನ್ ಒಡೆತನದಲ್ಲಿದೆ.
ಡೆಲ್ಲಿ ತಂಡದಲ್ಲಿ ಶ್ರೇಯಸ್ ಅಯ್ಯರ್ ಮೊದಲು ನಾಯಕರಾಗಿದ್ದಾರೆ. ಇವರಿಗೆ ಇಂಜುರಿ ಆದ ನಂತರ ರಿಷಬ್ ಪಂತ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಎರಡನೇ ಹಂತದಲ್ಲಿ ಶ್ರೇಯಸ್ ಅಯ್ಯರ್ ಹಿಂದುರಿಗಿದರೂ ರಿಷಬ್ ಪಂತ್ ಅವರನ್ನೇ ತಂಡದ ನಾಯಕರನ್ನಾಗಿ ಪ್ರಾಂಚೈಸಿ ಮುಂದುವರೆಸಿತ್ತು. ಅಲ್ಲದೇ, ಮುಂದಿನ ಐಪಿಎಲ್ ಅವಧಿಯಲ್ಲಿ ರಿಷಬ್ ಪಂತ್ ಅವರೇ ನಾಯಕರಾಗಿದ್ದಾರೆ ಎಂಬ ಘೋಷಣೆಯನ್ನು ಮಾಡಿತ್ತು. ಇದರಿಂತ ಬೇಸರಗೊಂಡಿದ್ದ ಶ್ರೇಯಸ್ ಅಯ್ಯರ್ ಡೆಲ್ಲಿ ತಂಡವನ್ನು ಬಿಟ್ಟು ಹೊರಬಂದಿದ್ದರು.
🚨 Ladies and gentlemen, boys and girls, say hello 👋 to the NEW SKIPPER of the #GalaxyOfKnights
অধিনায়ক #ShreyasIyer @ShreyasIyer15 #IPL2022 #KKR #AmiKKR #Cricket pic.twitter.com/veMfzRoPp2
— KolkataKnightRiders (@KKRiders) February 16, 2022
ಮೂಲ ಹರಾಜು 2 ಕೋ.ರೂ ಬೆಲೆ ಹೊಂದಿದ್ದ ಶ್ರೇಯಸ್ ಅಯ್ಯರ್ ಬರೋಬ್ಬರಿ 12.5ಕೋ.ರೂಗಳಿಗೆ ಖರೀದಿಯಾಗಿದ್ದಾರೆ. ಇವರಿಗೆ ಕೆಕೆಆರ್ ತಂಡ ನಾಯಕತ್ವ ನೀಡಿರುವ ಬಗ್ಗೆ ಆಧಿಕೃತವಾಗಿ ಘೋಷಣೆ ಮಾಡಲಾಗಿದೆ.