ಆಸ್ಪತ್ರೆಯಲ್ಲಿ ಮೃತಪಟ್ಟಿದೆ ಎಂದು ಘೊಷಿಸಲಾಗಿದ್ದ ಮಗು ಸ್ಮಶಾನದಲ್ಲಿ ಜೀವಂತವಾಗಿರುವ ಘಟನೆ ಸಿಂಧನೂರು ಪಕ್ಷದ ತುರ್ವಿಹಾಳ ನಗರದಲ್ಲಿ ನಡೆದಿದೆ.
ತಾಲ್ಲೂಕಿನ ತುರ್ವಿಹಾಳ ಪಟ್ಟಣದ ಈರಪ್ಪ ಮತ್ತು ಅಮರಮ್ಮ ದಂಪತಿಗೆ ಜನಿಸಿದ ಮಗು ಇದಾಗಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಮಣ್ಣುಪಾಲಾಗುತ್ತಿದ್ದ ಮಗು ಸಂಬಂಧಿಗಳು ವಹಿಸಿದ ಜಾಗರೂಕತೆಯಿಂದ ಬದುಕುಳಿದಿದೆ.
ಸಿಂಧನೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ಮೃತಪಟ್ಟಿದೆ ಎಂದು ಮಕ್ಕಳ ವೈದ್ಯರು ಘೋಷಿಸಿದ್ದರು. ಇದರಿಂದಾಗಿ ಸಂಬಂಧಿಗಳೆಲ್ಲ ಅಂತ್ಯಸಂಸ್ಕಾರಕ್ಕೆ ತೆರಳಿದ್ದಾರೆ. ಈ ವೇಳೆ ಸ್ಮಶಾನದಲ್ಲಿ ಮಗು ಇನ್ನ ಜೀವಂತವಾಗಿರುವುದು ಸಂಬಂಧಿಕರಿಗೆ ತಿಳಿದುಬಂದಿದೆ. ಈ ವಿಷಯ ತಿಳಿದ ಮಗುವಿನ ದಂಪತಿಗಳ ಮುಖದಲ್ಲಿ ಮರಳಿ ಮಂದಹಾಸ ಮೂಡಿದೆ.
ತುರ್ವಿಹಾಳ ಸರ್ಕಾರಿ ಆಸ್ಪತ್ರೆಯಲ್ಲಿ ಅಮರಮ್ಮ ಅವರಿಗೆ ಶನಿವಾರವೆ ಹೆರಿಗೆಯಾಗಿತ್ತು. ಮಗುವಿಗೆ ಚಿಕಿತ್ಸೆ ಅಗತ್ಯವಿದ್ದ ಕಾರಣ, ಮಗುವನ್ನು ಮಾತ್ರ ಸಿಂಧನೂರು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದರು. ಮಂಗಳವಾರದಿಂದ ಶನಿವಾರ ಬೆಳಗಿನ 4 ಗಂಟೆಯ ವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಶನಿವಾರ ಬೆಳಗಿನ ಜಾವ ಮಗು ಮೃತಪಟ್ಟಿದೆ ಘೋಷಿಸಿದ್ದರು.
ಪ್ರಸ್ತುತ ಮಗುವಿಗೆ ಸಿಂಧನೂರಿನ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗು ಮೃತಪಟ್ಟಿದೆ ಎಂದು ಘೋಷಿಸಿದ್ದ ವೈದ್ಯ ಹಾಗೂ ಆಸ್ಪತ್ರೆಯ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.