ನ್ಯೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಅಯೂಬ್ ಖಾನ್ ಅವರು ಹಿಜಾಬ್ ವಿವಾದದ ಬಗ್ಗೆ ಮಾತನಾಡುತ್ತಾ ಗೊಮ್ಮಟೇಶ್ವರ ಸ್ವಾಮಿಯನ್ನು ಅವಮಾನ ಮಾಡಿದ್ದರು. ಇವರ ಹೇಳಿಕಯನ್ನು ಹಲವು ಜನರು ಖಂಡಿಸಿದ್ದಾರೆ. ಇದೀಗ, ಮಾಜಿ ಸಚಿವ ಅಭಯ್ ಚಂದ್ರ ಜೈನ್ ಅವರು ಅಯೂಬ್ ಅವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನ್ಯೂ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ಗೊಮ್ಮಟೇಶ್ವರ ಸ್ವಾಮಿಯ ಅವಹೇಳನ ಮಾಡಿದ್ದನ್ನು ಖಂಡಿಸುತ್ತೇನೆ. ನ್ಯೂ ಕಾಂಗ್ರೆಸ್ ಪಕ್ಷಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಆದರೂ ಆತನ ಹೇಳಿಕೆಯನ್ನು ಉಪಯೋಗಿಸಿ ಜನರ ದಿಕ್ಕು ತಪ್ಪಿಸಲು ಕಾಂಗ್ರೆಸ್ ಪಕ್ಷವನ್ನು ನಿಂದಿಸುತ್ತಿರುವ ರಾಜಕೀಯ ಪ್ರೇರಿತ ಕೆಲವ್ಯಕ್ತಿಗಳ ಕುತಂತ್ರವನ್ನು ಖಂಡಿಸುತ್ತೇನೆ ಎಂದು ಹೇಳಿದ್ದಾರೆ.
https://twitter.com/K_Abhayachandra/status/1492087068922564608?s=20&t=6pMMV1k7adDvVq4GjmkZUQ
https://youtu.be/wNd0tLud9NY