ಅಸಲಿ ಚಿನ್ನ ಗಿರವಿ ಇಟ್ಟುಕೊಂಡಿದ್ದ ಕೋಶಮಟ್ಟಂ ಎನ್ನುವ ಖಾಸಗಿ ಫೈನಾನ್ಸ್ ಗ್ರಾಹಕನಿಗೆ ನಕಲಿ ಚಿನ್ನ ನೀಡುವ ಮೂಲಕ ಮಹಾ ದೋಖಾ ಎಸಗಿದೆ.
ಮಾದಾಪುರ ಗ್ರಾಮದ ಮಹೇಶ್ ಎಂಬುವವರು ಕೋಶಮಟ್ಟಂ ಫೈನಾನ್ಸ್ನಿಂದ ವಂಚನೆಗೊಳಗಾದ ಗ್ರಾಹಕ. ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
2021 ಆಗಸ್ಟ್ ನಲ್ಲಿ ಮಹೇಶ್ ಹುಲ್ಲಹಳ್ಳಿಯಲ್ಲಿರುವ ಕೋಶಮಟ್ಟಂ ಫೈನಾನ್ಸ್ ನಲ್ಲಿ ಚಿನ್ನವನ್ನ ಗಿರವಿ ಇಟ್ಟಿದ್ದರು. ಕೆಲ ದಿನಗಳ ಹಿಂದೆ ಸಾಲದ ಹಣ ಹಿಂದಿರುಗಿಸಿದಾಗ ನಕಲಿ ಚಿನ್ನ ಕೊಟ್ಟಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿಗಳು ಸಮರ್ಪಕ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ಅಲ್ಲದೇ, ಕಂಪ್ಲೇಂಟ್ ಕೊಡ್ತೀನಿ ಅಂದ್ರೂ ಲೆಕ್ಕಿಸದ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ.
ಇದರಿಂದ ರೋಸಿ ಹೋದ ಗ್ರಾಹಕ ಮಹೇಶ್ ನಂಜನಗೂಡು ತಾಲೂಕಿನ ನ್ಯಾಯಕ್ಕಾಗಿ ಹುಲ್ಲಹಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ. ಇದೀಗ ಕೋಶಮಟ್ಟಂ ಫೈನಾನ್ಸ್ ವಿರುದ್ಧ ಮಹೇಶ್ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.