ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಕಾಶ್ಮೀರಿ ಪಂಡಿತರೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಕಾಶ್ಮೀರದ ಬುದ್ಗಾಮ್ನ ಚಡೋರಾದಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ನೌಕರರಾಗಿದ್ದ ರಾಹುಲ್ ಭಟ್ ಅವರನ್ನು ಉಗ್ರಗಾಮಿಗಳು ಗುಂಡಿಕ್ಕಿ ಕೊಲೆಗೈಗಿದ್ದಾರೆ.
ಶಸ್ತಾçಸ್ತçಧಾರಿ ಇಬ್ಬರು ಭಯೋತ್ಪಾದಕರು ತಹಶೀಲ್ದಾರ್ ಕಚೇರಿಗೆ ನುಗ್ಗಿ ಗುಂಡಿನ ದಾಳಿ ನಡೆಸಿದರು. ದಾಳಿಗೊಳಗಾಗಿದ್ದ ರಾಹುಲ್ ಭಟ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಪ್ರಾಣಬಿಟ್ಟಿದ್ದಾರೆ.
ಅಕ್ಟೋಬರ್ ಬಳಿಕ ಕಾಶ್ಮೀರದಲ್ಲಿ ವಲಸೆ ಬಂದವರು ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ದಾಳಿ ನಡೆಯುತ್ತಿದೆ. ಅಕ್ಟೋಬರ್ನಲ್ಲಿ ಐದು ದಿನಗಳ ಅಂತರದಲ್ಲಿ ಐವರನ್ನು ಹತ್ಯೆ ಮಾಡಲಾಗಿತ್ತು. ಇವರಲ್ಲಿ ಒಬ್ಬರು ಕಾಶ್ಮೀರಿ ಪಂಡಿತರು, ಒಬ್ಬರು ಸಿಖ್ಖರು ಮತ್ತು ಇಬ್ಬರು ವಲಸಿಗರನ್ನು ಹತ್ಯೆ ಮಾಡಿದ್ದರು.
ಕೆಲ ತಿಂಗಳಿAದ ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಬಿಜೆಪಿ ಸರ್ಕಾರಗಳು ಉಚಿತವಾಗಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಪ್ರದರ್ಶನ ಮಾಡುತ್ತಿರುವುದು ಬಿಜೆಪಿ ಮತ್ತು ವಿರೋಧಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು.