ಭಾರತ ಕ್ರಿಕೇಟ್ ತಂಡದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿಯವರು ಕೊನೆಗೂ ತಮ್ಮ ಜೆರ್ಸಿ ನಂ.7 ರ ಗುಟ್ಟನ್ನು ಬಿಟ್ಟುಕೊಟ್ಟಿದ್ದಾರೆ.
40 ವರ್ಷ ವಯಸ್ಸಿನ ಕ್ರಿಕೇಟರ್ ಧೋನಿ ಜೆರ್ಸಿ ನಂ.7 ಬಟ್ಟೆಯನ್ನು ಸಾಮಾನ್ಯ ಕಾರಣದಿಂದಲೇ ಧರಿಸುತ್ತೇನೆ. ನನಗೆ ಲಕ್ಕಿ ಎಂಬ ಕಾರಣಕ್ಕೆ ಅಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, “ಮೊದಲಿಗೆ ಬಹಳಷ್ಟು ಜನರು ನನಗೆ ಜೆರ್ಸಿ ನಂ.7 ಅದೃಷ್ಟದ ಸಂಖ್ಯೆ ಎಂದು ಭಾವಿಸಿದ್ದರು. ಆದರೆ ನಾನು ತುಂಬಾ ಸರಳವಾದ ಕಾರಣಕ್ಕಾಗಿಯೇ ಈ ಸಂಖ್ಯೆಯನ್ನು ಆರಿಸಿದೆ. ನಾನು ಜುಲೈ 7 ರಂದು ಜನಿಸಿದೆ. ಅದು 7 ನೇ ತಿಂಗಳ 7 ನೇ ದಿನ ಅದು. ಹಾಗಾಗಿಯೇ, ನಣಾಉ ಜೆರ್ಸಿ ನಂ.7 ಧರಿಸೋದು.
ಯಾವ ಸಂಖ್ಯೆ ಉತ್ತಮ ಎನ್ನುವುದಕ್ಕಿಂತ ಹೆಚ್ಚಾಗಿ ನಾನು ನನ್ನ ಜನ್ಮ ದಿನಾಂಕವನ್ನು ಸಂಖ್ಯೆಯಾಗಿ ಬಳಸುತ್ತೇನೆ. ಜನರು ಅದರ ಬಗ್ಗೆ ನನ್ನನ್ನು ಕೇಳುತ್ತಲೇ ಇರುತ್ತಾರೆ ಎಂದು ಧೋನಿ ಸಿಎಸ್ಕೆ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.