ಉದ್ಯಮ ಕ್ಷೇತ್ರದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿಕೊಳ್ಳುತ್ತಿರುವ ಗುಜರಾತ್ ಮೂಲದ ಗೌತಮ್ ಅದಾನಿ ದೇಶದ ಅತ್ಯಂತ ಮಹತ್ವಾಕಾಂಕ್ಷೆಯ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಟೆಲಿಕಾಂ ಕ್ಷೇತ್ರಕ್ಕೂ ಅದಾನಿ ಲಗ್ಗೆ ಇಟ್ಟಿದ್ದಾರೆ.
ರಿಲಯನ್ಸ್ ಜಿಯೋ, ಏರ್ಟೆಲ್, ವೋಡಾಫೋನ್ ಐಡಿಯಾ ಜೊತೆಗೆ ಅದಾನಿ ಕಂಪನಿ ಕೂಡಾ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದೆ ಎಂದು ತಿಳಿದುಬಂದಿದೆ.
ಜುಲೈ 12ರೊಳಗೆ ಮಾಲೀಕತ್ವದ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಜುಲೈ 18ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ದೈತ್ಯ ಡಾಟಾ ಕಂಪನಿಯನ್ನು ಕಟ್ಟುವುದು ಗೌತಮ್ ಅದಾನಿ ಮಹತ್ವಾಕಾಂಕ್ಷೆ. ಇದಕ್ಕಾಗಿಯೇ ಈಗಾಗಲೇ ಎಡ್ಜ್ಕಾನೆಕ್ಸ್ ಜೊತೆಗೆ ಶೇಕಡಾ 50:50 ಪಾಲುದಾರಿಕೆ ಒಪ್ಪಂದ ಆಗಿದೆ. ನವಿ ಮುಂಬೈ, ಚೆನ್ನೈ, ವಿಶಾಖಪಟ್ಟಣ, ಹೈದ್ರಾಬಾದ್ ಮತ್ತು ನೋಯ್ಡಾದಲ್ಲಿ ಬೃಹತ್ ಡಾಟಾ ಕೇಂದ್ರಗಳು ತಲೆ ಎತ್ತಲಿವೆ.
ಈ ಮೂಲಕ ಅಮೆಜಾನ್ ಮತ್ತು ಗೂಗಲ್ ಜೊತೆಗೆ ಸ್ಪರ್ಧೆ ಮಾಡುವ ಲೆಕ್ಕಾಚಾರ ಅದಾನಿ ಕಂಪನಿಯದ್ದು.