ಏಪ್ರಿಲ್ 21 ನೇ ತಾರೀಖು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಗಳೂರಿಗೆ ಬರುತ್ತಿದ್ದು ನ್ಯಾಷನಲ್ ಕಾಲೇಜ್ ಗ್ರೌಂಡ್ ನಲ್ಲಿ ಬೃಹತ್ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಇದರ ಬಗ್ಗೆ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಮತ್ತು ಬೆಂಬಲಿಗರು #Kejriwal_ಬರ್ತಿದಾರೆ_ದಾರಿಬಿಡಿ ಎಂಬ ಅಭಿಯಾನ ನಡೆಸಿದ್ದು ಭಾರತದ ರಾಜಕೀಯ ಟ್ರೆಂಡಿಂಗ್ ನಲ್ಲಿ ಅದು ಮೂರನೇ ಸ್ಥಾನದಲ್ಲಿ ಓಡುತ್ತಿದೆ.
ಟ್ವಿಟರ್ ಅಂಗಳದಲ್ಲಿ ಕೇಜ್ರಿವಾಲ್ ಅವರನ್ನು ಸ್ವಾಗತಿಸಿ ಸಾವಿರಾರು ಟ್ವೀಟುಗಳು ಕಾಣುತ್ತಿವೆ. ಕೆಲವರು ಭ್ರಷ್ಟರಿಗೆ ಇದು ಅಂತ್ಯ ಅಂತ ಹೇಳಿ ಟ್ವೀಟ್ ಮಾಡಿದ್ದರೆ ಕೆಲವರು ವೆಲ್ಕಮ್ ಟು ಕರ್ನಾಟಕ ನಿಮ್ಮ ಅಗತ್ಯ ಇದೆ ಎಂದು ಟ್ವೀಟ್ ಮಾಡಿದರು.
#Kejriwal_ಬರ್ತಿದಾರೆ_ದಾರಿಬಿಡಿ for a Karnataka free of corruption , full of good health and education pic.twitter.com/j7Z0F57myK
— Urvashi (@500Urvashi) April 20, 2022
ಒಟ್ಟಾರೆ ನೆಟ್ಟಿಗರು ಕೇಜ್ರಿವಾಲ್ ಅವರನ್ನು ಬ್ರಷ್ಟರಿಗೆ ಸಿಂಹಸ್ವಪ್ನ ಮತ್ತು ಬ್ರಷ್ಟಾಚಾರ ಹಾಗು ದುರಾಡಳಿತದಿಂದ ಬಸವಳಿದ ಕರ್ನಾಟಕಕ್ಕೆ ಒಂದು ಆಶಾಕಿರಣ ಎಂದು ಭಾವಿಸುತ್ತಿದ್ದಾರೆ.
ವಾರದ ಹಿಂದೆ ಜನತೆಯ ಕಮಿಷನರ್ ಎಂದೇ ಖ್ಯಾತಿಯ ಭಾಸ್ಕರ್ ರಾವ್ ಎಎಪಿ ಸೇರಿದ್ದು ಸುದ್ದಿಯಾಗಿತ್ತು. ನಾಳಿನ ಕಾರ್ಯಕ್ರಮದಲ್ಲಿ ಇನ್ನಾರು ಘಟಾನುಗಟಿಗಳು ಪಕ್ಷ ಸೇರುತ್ತಾರೆ ಮತ್ತು ಕರ್ನಾಟಕದ ರಾಜಕಾರಣದ ವಿಚಾರವಾಗಿ ಕೇಜ್ರಿವಾಲ್ ಏನು ಹೇಳುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.