ತರಬೇತಿ ವಿಮಾನ ಪತನವಾಗಿದ್ದು, ಪೈಲಟ್ ಹಾಗೂ ಟ್ರೈನಿ ಪೈಲಟ್ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ತೆಲಂಗಾಣದ ನಲ್ಗೊಂಡ ಜಿಲ್ಲೆಯ ಪೆದ್ದವೂರ ಮಂಡಲದ ತುಂಗತುರ್ಥಿ ಗ್ರಾಮದ ಹೊಲದಲ್ಲಿ ತರಬೇತಿ ವಿಮಾನವೊಂದು ಪತನವಾಗಿರುವ ಘಟನೆ ಶನಿವಾರ ವರದಿಯಾಗಿದೆ. ವಿಮಾನ ಪತನದ ಸಂದರ್ಭದಲ್ಲಿ ಪೈಲಟ್ ಮತ್ತು ಟ್ರೈನಿ(ತರಬೇತಿ ಪಡೆಯುವ) ಪೈಲಟ್ ವಿಮಾನದಲ್ಲಿದ್ದರು ಎಂದು ತಿಳಿದು ಬಂದಿದ್ದು, ಇಬ್ಬರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ತುಂಗತುರ್ಥಿ ಗ್ರಾಮದ ಹೊಲದಲ್ಲಿ ಈ ಘಟನೆ ನಡೆದಿದೆ. ಅಲ್ಲಿಯೇ ಇದ್ದ ರೈತರೇ ತಕ್ಷಣ ಬೆಂಕಿ ನಂದಿಸಲು ಮತ್ತು ವಿಮಾನದಲ್ಲಿದ್ದ ಪೈಲಟ್ಗಳನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ.
ಇದು ನಾಗಾರ್ಜುನ್ ಸಾಗರ್ನಲ್ಲಿರುವ ಫ್ಲೈಟೆಕ್ ಏವಿಯೇಷನ್ ಖಾಸಗಿ ವಿಮಾನಯಾನ ಕಂಪೆನಿಗೆ ಸೇರಿದ ವಿಮಾನವಾಗಿದೆ. ನಲ್ಗೊಂಡ ಜಿಲ್ಲಾ ಪೊಲೀಸ್ ತಂಡಗಳು ಆರೋಗ್ಯ ಮತ್ತು ಕಂದಾಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.