ದಲಿತ ಸಮುದಾಯದವರನ್ನ ಮನಬಂದಂತೆ ಥಳಿಸಿ, ಕೊಲ್ಲುವ ನಿರ್ದೇಶನವನ್ನ ಭಜರಂಗ ದಳದವರಿಗೆ ನೇರವಾಗಿ ಕೇಶವ ಕೃಪ ನೀಡಿದೆಯಾ? ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ದಿನೇಶ್ ಎನ್ನುವ ವ್ಯಕ್ತಿಯನ್ನು ಭಜರಂಗದಳದ ನಾಯಕರೊಬ್ಬರು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಡೀಯೋ ತುಣುಕೊಂದು ಎಲ್ಲೆಡೆ ಹರಿದಾಡುತ್ತಿದೆ. ಈ ವೀಡಿಯೋ ಲಗತ್ತಿಸಿ ಟ್ವೀಟ್ ಮಾಡಿರುವ ಪ್ರಿಯಾಂಕ್ ಖರ್ಗೆಯವರು ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಅವರು, ದಲಿತ ಸಮುದಾಯದವರನ್ನ ಮನಬಂದಂತೆ ಥಳಿಸಿ, ಕೊಲ್ಲುವ ನಿರ್ದೇಶನವನ್ನ ಭಜರಂಗ ದಳದವರಿಗೆ ನೇರವಾಗಿ ಕೇಶವ ಕೃಪ ನೀಡಿದೆಯಾ?ದಲಿತರ ಕೊಲೆಯಾದಾಗ ಕರ್ನಾಟಕ ಪೊಲೀಸರಿಗೆ ತಮ್ಮ ಕರ್ತವ್ಯ ಮರೆತುಹೋಗುತ್ತದೆಯೇ? ಶಿವಮೊಗ್ಗದಲ್ಲಿ ಬಲಿಯಾದ ಯುವಕರ ಜೀವಕ್ಕಿರುವ ಬೆಲೆ ಧರ್ಮಸ್ಥಳದಲ್ಲಿ ಕೊಲೆಯಾಗಿರುವ ದಲಿತ ಹುಡುಗನ ಜೀವಕ್ಕಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
– ಈ ಕೊಲೆಗೆ ಪ್ರತೀಕಾರ ಪಡೀತೀವಿ ಎಂಬ ಹೇಳಿಕೆ ಗೃಹ ಸಚಿವರ ಬಾಯಲ್ಲಿ ಬರದಿರಲು,
– ನಮ್ಮ ಮಾಧ್ಯಮಗಳಿಗೆ ಕೊಲೆಯಾಗಿರುವ ಹುಡುಗನ ಕುಟುಂಬ ಕಾಣದಿರಲು
ದಲಿತ ಎಂಬ ಕಾರಣಕ್ಕೋ?
ಕೊಲೆಗಾರ ಬಜರಂಗದಳದವನು ಎನ್ನುವ ಕಾರಣಕ್ಕೋ?
ಬಡವರ ಮನೆ ಹುಡುಗ ಎಂಬ ಕಾರಣಕ್ಕೋ?
ಉತ್ತರಿಸಿ ಬೊಮ್ಮಾಯಿಯವರೇ? ಈಶ್ವರಪ್ಪನವರೇ? ಶ್ರೀನಿವಾಸ ಪೂಜಾರಿಗಳೇ!
2/2
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) February 26, 2022
ಈ ಕೊಲೆಗೆ ಪ್ರತೀಕಾರ ಪಡೀತೀವಿ ಎಂಬ ಹೇಳಿಕೆ ಗೃಹ ಸಚಿವರ ಬಾಯಲ್ಲಿ ಬರದಿರಲು, ನಮ್ಮ ಮಾಧ್ಯಮಗಳಿಗೆ ಕೊಲೆಯಾಗಿರುವ ಹುಡುಗನ ಕುಟುಂಬ ಕಾಣದಿರಲು ದಲಿತ ಎಂಬ ಕಾರಣಕ್ಕೋ? ಕೊಲೆಗಾರ ಬಜರಂಗದಳದವನು ಎನ್ನುವ ಕಾರಣಕ್ಕೋ? ಬಡವರ ಮನೆ ಹುಡುಗ ಎಂಬ ಕಾರಣಕ್ಕೋ? ಎಂದು ಪ್ರಶ್ನಿಸಿದ್ದಾರೆ. ಉತ್ತರಿಸಿ ಬೊಮ್ಮಾಯಿಯವರೇ? ಈಶ್ವರಪ್ಪನವರೇ? ಶ್ರೀನಿವಾಸ ಪೂಜಾರಿಗಳೇ! ಎಂದು ಪ್ರಿಯಾಂಕ್ ಖರ್ಗೆಯವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.