ಪ್ರತೀ ವಾರದ ಅಂತ್ಯ ಬಂದ್ರೆ ಸಾಕು ಚಲನ ಚಿತ್ರಗಳ ಹಬ್ಬವೇ ಆಗಿರುತ್ತದೆ. ಅದರೆ ಈ ವಾರ ತೆರೆ ಕಾಣುತ್ತಿರುವ ಚಿತ್ರಗಳಲ್ಲಿ ವೀಲ್ ಚೇರ್ ರೋಮಿಯೋ ಚಿತ್ರವೂ ಒಂದು.
ಈ ಸಿನಿಮಾವು ಒಂದು ಕಾಮಿಡಿ ಅಂಡ್ ಮೆಸೇಜ್ ಇರುವಂತ ಸಿನಿಮಾ ಎಂದು ಹೇಳಿದರೆ ತಪ್ಪಾಗಲಾರದು. ಒಬ್ಬ ಅಂಗವಿಕಲ ಅವನಿಗು ಆಸೆಗಳು ಇರುತ್ತೆ. ಅವನಲ್ಲಿಯು ಸಹ ಪ್ರೀತಿ ಹುಟ್ಟುತ್ತೆ ಆ ಪ್ರೀತಿನ ಹೇಗೆ ಕಾಪಡಿಕೊಳ್ಳುತ್ತಾನೆ ಅನೋದೆ ಚಿತ್ರದ ಕಥೆ. ಇನ್ನು ಎಮೋಷನಲ್ ಕಥೆಯನ್ನು ಪಂಚಿಂಗ್ ಡೈಲಾಗ್ಗಳ ಸಹಾಯದಿಂದ, ಕಲಾವಿದರ ಉತ್ತಮ ಕಾಮಿಡಿ ಟೈಮಿಂಗ್ ಆಂಡ್ ನಟನೆಯಿಂದ ಹ್ಯೂಮರಸ್ ಆಗಿ ತೆರೆಮೇಲೆ ತಂದಿದ್ದಾರೆ ನಿರ್ದೇಶಕ ನಟರಾಜ್.
ನಿರ್ದೇಶಕ ನಟರಾಜ್ ಡೈಲಾಗ್ ರೈಟರ್ ಆಗಿದ್ದವರು. ‘ರೋಮಿಯೋ’ ಸೇರಿದಂತೆ ಅಲವಾರು ಸಿನಿಮಾಗಳಿಗೆ ಡೈಲಾಗ್ ಬರೆದು ಎಲ್ಲರ ಗಮನಸೆಳೆದವರು. ಆದರೆ ಈ ಸಿನಿಮಾಗೆ ಗುರು ಕಶ್ಯಪ್ ಅವರಿಂದ ಸಂಭಾಷಣೆ ಬರೆಸಿದ್ದಾರೆ. ಇಡೀ ಸಿನಿಮಾ ಸಾಗುವುದೇ ಗುರು ಕಶ್ಯಪ್ ಬರೆದ ಪಂಚಿಂಗ್ ಡೈಲಾಗ್ಗಳ ಬಲದಿಂದ ಎಂದರೆ ತಪ್ಪಿಲ್ಲ.
ಸುಚೇಂದ್ರ ಪ್ರಸಾದ್ ಅವರು ತಂದೆಯ ಪಾತ್ರವನ್ನು ಅದ್ಭುತವಾಗಿ ಮಾಡಿದ್ದಾರೆ ಮಗನ ಆಸೆ, ಧರ್ಯ, ಭಲಗಳ ಶಕ್ತಿ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಟ ರಂಗಾಯಣ ರಘು ಅವರು ಪಿಂಪ್ ಪಾತ್ರ ನಿರ್ವಹಿಸಿದ್ದಾರೆ. ಅವರ ಕಾಮಿಡಿ ಸೇನ್ಸ್ ಆಂಡ್ ಡೈಲಾಗ್ ಗೆ ಚಿತ್ರಮಂದಿದರಲ್ಲಿ ನಗದವರಿಲ್ಲ.
ನಟಿ ಮಯೂರಿಯು ಸಹ ಈ ಚಿತ್ರದಲ್ಲಿ ಒಂದು ಉತ್ತಮ ನಟನೆಯನ್ನು ಮಾಡಿದ್ದಾರೆ. ಒಬ್ಬ ಕುರುಡಿ ವೇಶ್ಯಾವಾಟಿಕೆ ಮಾಡಿದ್ದರೆ ಏನಾಗುತ್ತೆ.? ಅವಳು ವೇಶ್ಯಾವಾಟಿಕೆಗೆ ಬರುವುಕ್ಕೆ ಕಾರಣ ಏನು..? ನಮ್ಮ ದೇಶದಲ್ಲಿ ಊಗಲೂ ಇಂತಹ ವ್ಯವಹಾರ ಮಾಡುತ್ತಿದ್ದಾರಾ ಎಂಬ ವಿಷಯವನ್ನು ತಿಳಿಸಿದ್ದಾರೆ.
ಒಟ್ಟಾರೆಯಾಗಿ, ಈ ಸಿನಿಮಾ ಒಂದು ಫ್ಯಾಮಿಲಿ ಎಂಟರ್ಟೈನ್ ಸಿನಿಮಾ ಆಗಿದೆ.
ಇನ್ನು ವೀಲ್ ಚೇರ್ ರೋಮಿಯೋ ಚಿತ್ರದಲ್ಲಿ ರಾಮ್ ಚೇತನ್, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಮಯೂರಿ ಅಂತಹ ತಾರಾ ಬಳಗವನವು ಈ ಚಿತ್ರತಂಡ ಹೊಂದಿದೆ.