ತಮ್ಮಿಂದ ಅನ್ಯಾಯವಾಗಿದೆ ಎಂದು ಆ ಮಹಿಳೆ ಸುಳ್ಳು ಆರೋಪ ಮಾಡಿ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ್ ಆರೋಪ ಮಾಡಿದ್ದಾರೆ.
ಮಹಿಳೆಯೊಬ್ಬರು ತಮ್ಮ ವಿರುದ್ಧ ಆರೋಪ ಮಾಡಿ ಮಾಧ್ಯಮಗಳ ಮುಂದೆ ಬಂದಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ..
ಸರ್ಕಾರ ಯಾವುದೇ ರೀತಿಯ ತನಿಖೆ ನಡೆಸಲಿ. ತಪ್ಪಿತಸ್ಥರು ಯಾರೇ ಇದ್ರೂ ಕ್ರಮ ಕೈಗೊಳ್ಳಲಿ. ನಾನು ಆಕೆಯಿಂದ ನಿರಂತರ ಬ್ಲಾಕ್ಮೇಲ್ ಗೆ ಒಳಗಾಗಿದ್ದೇನೆ ಎಂದು ಹೇಳುತ್ತಾ ಶಾಸಕರು ಕಣ್ಣೀರು ಇಟ್ಟಿದ್ದಾರೆ
ಫೆಬ್ರವರಿ ಐದರಂದು ಬೆಂಗಳೂರಿನ ವಿಧಾನ ಸೌಧ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಎಂದು ಶಾಸಕರು ತಿಳಿಸಿದ್ದಾರೆ. 2008ರಲ್ಲಿ ಆ ಮಹಿಳೆ ಹೇಗೆ ಪರಿಚಯ ಆದರು ಎಂಬುದರಿಂದ ಹಿಡಿದು ಸಿಎಂಗೆ ಆಕೆ ದೂರು ನೀಡಿರುವ ಕ್ಷಣದವರೆಗೂ ವಿವರವಾಗಿ ಮಾಹಿತಿ ನೀಡಿದ್ದಾರೆ. ಆಕೆ 2 ಕೋಟಿಗೆ ಬೆದರಿಕೆ ಇಟ್ಟು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪ ಮಾಡಿದ್ದಾರೆ. ಈ ಬೆಳವಣಿಗೆ ಹಿಂದೆ ಮಾಜಿ ಮಂತ್ರಿ ಶರಣ್ ಪ್ರಕಾಶ್ ಪಾಟೀಲ್ ಪಾತ್ರ, ಕುಮ್ಮಕ್ಕಿನ ಬಗ್ಗೆ ರಾಜಕುಮಾರ್ ಪಾಟೀಲ್ ತೆಲಕೂರ್ ಆರೋಪ ಮಾಡಿದ್ದಾರೆ. ತಮ್ಮ ವಿರುದ್ಧ ಆರೋಪ ಮಾಡಿರುವ ಮಹಿಳೆಗೆ 1 ಕೋಟಿ ಆಮಿಷ ಒಡ್ಡಿದ್ದಾರೆ ಎಂದು ಶಾಸಕರು ಆರೋಪ ಮಾಡಿದ್ದಾರೆ.
ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ನಾನು ಮಾಡಿಲ್ಲ. ಪಕ್ಷಕ್ಕೆ ಕಾರ್ಯಕರ್ತರಿಗೆ ಮತದಾರರಿಗೆ ಮುಜುಗರ ತರುವ ಕೆಲಸ ನನ್ನಿಂದ ಆಗಿಲ್ಲ.. ನಾನು ಕಾನೂನು ಹೋರಾಟಕ್ಕೆ ಸಿದ್ದನಿದ್ದೇನೆ. ನನಗೂ ಸಹ ಕುಟುಂಬವಿದೆ ಹೀಗಾಗಿ ತುಂಬಾ ನೊಂದಿದ್ದೇನೆ ಎಂದು ಕಣ್ಣೀರು ಇಟ್ಟಿದ್ದಾರೆ.
ಪ್ರಕರಣದಲ್ಲಿ ಸುಖಾ ಸುಮ್ಮನೆ ಸಿಎಂ ಬೊಮ್ಮಾಯಿ ಹೆಸರು ತರುವುದು ಸರಿ ಅಲ್ಲ ಎಂದು ಶಾಸಕರು ತಿಳಿಸಿದ್ದಾರೆ.