‘ದ ಕಾಶ್ಮೀರ ಫೈಲ್ಸ್’ ಚಿತ್ರದ ನಿರ್ದೇಶಕ ‘ವಿವೇಕ್ ಅಗ್ನಿಹೋತ್ರಿ’ಯವರಿಗೆ ದೇಶಾದಾದ್ಯಂತ ಸಿಆರ್ಪಿಎಫ್ನಿಂದ ‘Y’ ಶ್ರೇಣಿಯ ಭದ್ರತೆಯನ್ನು ನೀಡಿ ಕೇಂದ್ರದ ಗೃಹ ಇಲಾಖೆ ಆದೇಶ ಹೊರಡಿಸಿದೆ.
ವಿವೇಕ್ ಅಗ್ನಿಹೋತ್ರಿ ದ ಕಾಶ್ಮೀರ ಫೈಲ್ಸ್ ಚಿತ್ರದ ನಿರ್ದೇಶಕರಾಗಿದ್ದಾರೆ. 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರು, ಕಾಶ್ಮೀರ ಬಿಟ್ಟು ಹೋಗಿರುವುದರ ಕಥೆಯನ್ನಿಟ್ಟುಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ಈ ಚಿತ್ರದ ಚಿತ್ರಕಥೆ, ಕಾಶ್ಮೀರ ಪಂಡಿತರ ದುರಂತದ ಬಗ್ಗೆ ಕಣ್ಣಿಗೆ ರಾಚುವಂತಹ ದೃಶ್ಯಗಳಿಂದ ಈ ಚಿತ್ರ ಮತಷ್ಟು ಮುನ್ನೆಲೆಗೆ ಬಂದಿತ್ತು.
ದೇಶದಾದ್ಯಂತ ‘ದ ಕಾಶ್ಮೀರ ಫೈಲ್ಸ್ ‘ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಈ ಚಿತ್ರಕ್ಕೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯ ಸರ್ಕಾರಗಳು ತೆರಿಗೆ ವಿನಾಯಿತಿಯನ್ನು ನೀಡಿವೆ. ಮತ್ತೊಂದಡೆ ಚಿತ್ರದ ಕಥೆಯಿಂದಾಗಿ ವಿವಾದಕ್ಕೀಡಾಗಿದೆ.
ವಿವೇಕ್ ಅಗ್ನಿಹೋತ್ರಿಯವರ ಪತ್ನಿ ಹಾಗೂ ನಟಿ ಪಲ್ಲವಿಯವರು ಈ ಚಿತ್ರದ ನಿರ್ಮಾಪಕರು. ಕಾಶ್ಮೀರದಲ್ಲಿ ಶೂಟಿಂಗ್ ಮಾಡುವಾಗ ನಮ್ಮ ಮೇಳೆ ಪತ್ವಾ ಹೊರಡಿಸಲಾಗಿತ್ತು ಎಂದು ಹೇಳಿದ್ದಾರೆ. ಚಿತ್ರದ ಬಿಡುಗಡೆಗೂ ಮುಂಚೆ ಅನೇಕ ಬೆದರಿಕೆಗಳು ಬಂದ ಹಿನ್ನೆಲೆಯಲ್ಲಿ ಇವರು ತಮ್ಮ ಟ್ವಿಟ್ಟರ್ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದರು.
ಕಳೆದ ವರ್ಷ ಬಾಲಿವುಡ್ ನಟಿ ಕಂಗನಾ ರಣಾವತ್ ಅವರಿಗೂ ಕೇಂದ್ರದ ಗೃಹ ಇಲಾಖೆ Y ಶ್ರೇಣಿಯ ಭದ್ರತೆಯನ್ನು ನೀಡಿತ್ತು.