ಪಂಜಾಬ್ ಮುಖ್ಯಮಂತ್ರಿಯಾಗಿ ಭಗವಂತ್ ಮಾನ್ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಅವರ ಕ್ಯಾಬಿನೆಟ್ ಕೂಡಾ ರಚನೆಯಾಗಿದ್ದು, ಇಂದು ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ 10 ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವಿರೋಧ ಪಕ್ಷದ ಮಾಜಿ ನಾಯಕ ಹರ್ಪಾಲ್ ಸಿಂಗ್ ಚೀಮಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಸಮಾರಂಭ ಪ್ರಾರಂಭವಾಯಿತು. ಬರ್ನಾಲಾದಿಂದ ಎರಡನೇ ಬಾರಿಗೆ ಗೆದ್ದ ಗುರ್ಮೀತ್ ಸಿಂಗ್ ಮೀತ್ ಹಯರ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಲೌಟ್ನಿಂದ ಆಯ್ಕೆಯಾಗಿದ್ದ ಡಾ ಬಲ್ಜಿತ್ ಕೌರ್, ಜಂಡಿಯಾಲಾದ ಶಾಸಕ ಹರ್ಭಜನ್ ಸಿಂಗ್ ಇಟಿಒ, ಮಾನ್ಸಾದಿಂದ ಚುನಾಯಿತರಾದ ಡಾ ವಿಜಯ್ ಸಿಂಗ್ಲಾ, ಭೋವಾದಿಂದ ಆಯ್ಕೆಯಾದ ಲಾಲ್ ಚಂದ್ ಕಟಾರು ಚಾಕ್, ಅಜ್ನಾಲಾ ಶಾಸಕ ಕುಲದೀಪ್ ಸಿಂಗ್ ಧಲಿವಾಲ್, ಪಟ್ಟಿ ಶಾಸಕ ಲಾಲ್ಜಿತ್ ಸಿಂಗ್ ಭುಲ್ಲಾರ್, ಬ್ರಾಮ್ ಶಂಕರ್ (ಜಿಂಪಾ), ಆನಂದಪುರ ಸಾಹಿಬ್ ಶಾಸಕ ಹೊಶಿಯಾರ್ಪುರ್ ಮತ್ತು ಹರ್ಜೋತ್ ಸಿಂಗ್ ಬೈನ್ಸ್ ಮೊದಲ ಬಾರಿ ಆಯ್ಕೆಯಾಗಿ ಸಚಿವರಾದ ಶಾಸಕರಾಗಿದ್ದಾರೆ.
ಮಹಿಳೆ ಸೇರಿದಂತೆ ನಾಲ್ವರು ಜಾಟ್, ನಾಲ್ವರು ಎಸ್ಸಿಗಳು ಮತ್ತು ಇಬ್ಬರು ಹಿಂದೂಗಳು ಕ್ಯಾಬಿನೆಟ್ ನಲ್ಲಿ ಒಳಗೊಂಡಿದ್ದಾರೆ. ಎಲ್ಲ ಶಾಸಕರಿಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಪ್ರಮಾಣ ವಚನ ಬೋಧಿಸಿದರು.