ಚರಣ್ ಜಿತ್ ಸಿಂಗ್ ಚನ್ನಿಯವರನ್ನು ಪಂಜಾಬ್ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಇಂದು ರಾಹುಲ್ ಗಾಂಧಿಯವರು ಘೋಷಣೆ ಮಾಡಿದ್ದಾರೆ.
ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಚರನ್ ಜಿತ್ ಸಿಂಗ್ ಚನ್ನಿ ಹಾಗೂ ಒಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ನಡುವೆ ಮುಂದಿನ ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗುವಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಇದೀಗ ಈ ಪೈಪೋಟಿಗೆ ಬ್ರೇಕ್ ಬಿದ್ದಿದ್ದು, ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಚರಣ್ ಜಿತ್ ಸಿಂಗ್ ಚನ್ನಿಯವರೇ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.
ಪಂಜಾಬ್ ಪ್ರವಾಸದಲ್ಲಿರುವ ಸಂಸದ ರಾಹುಲ್ ಗಾಂಧಿಯವರು ಇಂದು ಈ ಘೋಷಣೆ ಮಾಡಿದ್ದಾರೆ. ನಿನ್ನೆಯಷ್ಟೇ ನವಜೋತ್ ಸಿಂಗ್ ಸಿಧು ಅವರು ಹೈಕಮಾಂಡ್ ಯಾರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಮಾಡಲಿ. ಹೈಕಮಾಂಡ್ ನಿರ್ಧಾರಕ್ಕೆ ನನ್ನ ಬೆಂಬಲವಿದೆಯಂದು ನಿನ್ನೆಯಷ್ಟೇ ತಿಳಿಸಿದ್ದರು. ಈ ಬೆನ್ನಲ್ಲೇ, ಚರಣ್ ಜಿತ್ ಸಿಂಗ್ ಚನಿಯವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ.
I thank everyone. This is a big battle which I can't fight alone. I don't have the money, courage to fight it. The people of Punjab will fight this battle: Punjab CM Charanjit Singh Channi after he was announced as Congress' CM face for the #PunjabElections2022 pic.twitter.com/7yC8xxzbyy
— ANI (@ANI) February 6, 2022
ಚರಣ್ ಜಿತ್ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಲು ಕಾರಣವೇನು..?
ಕ್ಯಾಪ್ಟನ್. ಅಮರೀಂದರ್ ಸಿಂಗ್ ಅವರಿಂದ ಕಾಂಗ್ರೆಸ್ ಹೈಕಮಾಂಡ್ ಪಂಜಾಬ್ ಸಿಎಂ ಸ್ಥಾನಕ್ಕೆ ಒತ್ತಾಯದಿಂದ ರಾಜೀನಾಮೆ ಪಡೆದಿತ್ತು. ಅನಂತರದಲ್ಲಿ ನವಜೋತ್ ಸಿಂಗ್ ಸಿಧು ಅವರೇ ಪಂಜಾಬ್ ಸಿಎಂ ಆಗಬೇಕಿತ್ತು. ಆದರೆ, ಅಮರೀಂದರ್ ಸಿಂಗ್ ಅವರ ವಿರೋಧದಿಂದ ಇವರ ಆಯ್ಕೆಯನ್ನು ಕಾಂಗ್ರೆಸ್ ಹೈಕಮಾಂಡ್ ಕೈಬಿಟ್ಟಿತ್ತು.
ಈ ಸಮಯದಲ್ಲಿ ಕಾಂಗ್ರೆಸ್ಗೆ ಹೊಸ ಮುಖವಾಗಿ ಕಂಡಿದ್ದು ಚರಣ್ ಜಿತ್ ಸಿಂಗ್ ಚನ್ನಿ. ಚರಣ್ ಜಿತ್ ಸಿಂಗ್ ಚನ್ನಿಯವರು ಪಂಜಾಬ್ ರಾಜ್ಯದ ಮೊದಲ ಸಿಎಂ ಆಗಿ ಆಯ್ಕೆಯಾಗಿದ್ದರು. ಸಿಎಂ ಆಗಿ ಆಯ್ಕೆಯಾದ ನಂತರ ಇವರ ಚಾರ್ಮ್ ರಾಜ್ಯದಲ್ಲಿ ಹೆಚ್ಚುತ್ತಾ ಹೋಯಿತು. ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ನಲ್ಲಿ ರೈತರಿಂದ ವಿರೋಧ ಎದುರಿಸಿದ ನಂತರ ಪಂಜಾಬ್ನಲ್ಲಿ ನವಜೋತ್ ಸಿಂಗ್ ಸಿಧು ಅವರನ್ನು ಮೀರಿಸುವಷ್ಟು ಇವರ ಚಾರ್ಮ್ ಬೆಳೆದಿದೆ.
ಅಲ್ಲದೇ, ಚರನ್ ಜಿತ್ ಸಿಂಗ್ ಅವರು ದಲಿತ ನಾಯಕರಾಗಿರುವುದು ಕಾಂಗ್ರೆಸ್ಗೆ ಧನಾತ್ಮಕ ಅಂಶವಾಗಿದೆ. ಈ ಹಿನ್ನೆಲೆಯಲ್ಲಿಯೇ, ಕಾಂಗ್ರೆಸ್ ಹೈಕಮಾಂಡ್ ಚರಣ್ ಜಿತ್ ಸಿಂಗ್ ಚನ್ನಿಯವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ.