ಪುನೀತ್ ರಾಜ್ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಚೀಟಿ ಬರೆದು ಅಭಿಮಾನಿಯೊಬ್ಬರು ಕಲಬುರ್ಗಿ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದಾರೆ.
ನಿನ್ನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಯಿತು. ಈ ವೇಳೆ ಸಿಕ್ಕ ಹುಂಡಿಯಲ್ಲಿ ಚೀಟಿಯೊಂದು ಸಿಕ್ಕಿದೆ. ಅದರಲ್ಲಿ ಪುನೀತ್ ರಾಜ್ಕುಮಾರ್ ಅವರನ್ನು ಮರಳಿ ಕಳುಹಿಸು ಪ್ರಭು ಎಂದು ಅಭಿಮಾನಿಯೊಬ್ಬರು ದೇವರಲ್ಲಿ ಬೇಡಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ವಿಧಿವಶರಾಗಿ ಹಲವು ತಿಂಗಳುಗಳೇ ಕಳೆದಿವೆ. ಆದರೆ, ಅಭಿಮಾನಿಗಳಿಗೆ ಅಪ್ಪು ಅವರನ್ನು ಮರೆಯಲು ಸಾಧ್ಯವಾಗುತ್ತಿಲ್ಲ.
ಇನ್ನು, ಇದೇ ಮಾರ್ಚ್ 17 ರಂದು ಪುನೀತ್ ರಾಜ್ಕುಮಾರ್ ಅವರ ಜನ್ಮದಿನೋತ್ಸವದಂದು ಅವರ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಅಭಿಮಾನಿಗಳು ಜೇಮ್ಸ್ ಜಾತ್ರೆಯನ್ನಾಗಿ ಸೆಲೆಬ್ರೇಷನ್ ಮಾಡಿದರು. ಅಲ್ಲದೇ, ಈ ಚಿತ್ರ 100 ಕೋಟಿ. ರೂ.ಗಳಿಕೆಯ ಕ್ಲಬ್ ಸೇರಿದೆ.