ಬೆಂಗಳೂರಿನ ಬೈಯಪ್ಪನಹಳ್ಳಿ ಮತ್ತು ಕೆ ಆರ್ ಪುರಂ ಮಾರ್ಗದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸಂಪರ್ಕಿಸುವ ಮೂರು ರೈಲುಗಳ ಓಡಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಬಂಗಾರಪೇಟೆ-ಬೆಂಗಳೂರು ಮೆಮು ರೈಲಿನ ಓಡಾಟವನ್ನು ಡಿಸೆಂಬರ್ 14ರಂದು ರದ್ದುಗೊಳಿಸಲಾಗಿದೆ.
ಬೆಂಗಳೂರು-ಬಂಗಾರಪೇಟೆ ನಡುವಿನ ಮೆಮು ರೈಲಿನ ಸಂಚಾರವನ್ನು ಡಿಸೆಂಬರ್ 5 ಮತ್ತು 12 ರಂದು ರದ್ದುಗೊಳಿಸಲಾಗಿದೆ.
ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು-ಬಂಗಾರಪೇಟೆ ನಡುವಿನ ಮೆಮು ರೈಲಿನ ಓಡಾಟವನ್ನು ಡಿಸೆಂಬರ್ 5 ಮತ್ತು 12ರಂದು ರದ್ದುಗೊಳಿಸಲಾಗಿದೆ.