ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಸಿ ಕೆ ಸಂಸ್ಥೆ ಮುಂಬೈ ಇವರುಗಳ ಸಂಯುಕ್ತಾಶ್ರಯದಲ್ಲಿ ಸಿಕೆ ಇಂಡಿಯಾ ಉತ್ಸವ 2024 ರ ಶೀರ್ಷಿಕೆ ಯಡಿ ಬೆಳಗಾವಿ ನಗರ ವಲಯದ ಮಹಾಂತೇಶ ನಗರ, ಕಣಬರ್ಗಿ, ಟಿಳಕವಾಡಿ, ವಡಗಾಂವ, ಶಹಾಪುರ, ಖಾಸಬಾಗ, ಗಾಂಧಿನಗರ, ಸದಾಶಿವ ನಗರ, ಪಿ ಎಚ್ ಕ್ಯೂ, ಚವಾಟ ಗಲ್ಲಿ,ಗಣಪತ ಗಲ್ಲಿ, ಪುಲಬಾಗ ಗಲ್ಲಿ ಮುಂತಾದ ವಿವಿಧ ಕ್ಲಸ್ಟರ್ ಗಳ ಆಯ್ದ ಸರಕಾರಿ ಕನ್ನಡ ಮತ್ತು ಮರಾಠಿ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಕಲಿಕಾ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟಕರಾದ ಶ್ರೀ ಐ ಡಿ ಹಿರೇಮಠ, ಕ್ಷೇತ್ರ ಸಮನ್ವಯ ಅಧಿಕಾರಿಗಳು, ಬೆಳಗಾವಿ ನಗರ ವಲಯ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಸಿ ಕೆ ಸಂಸ್ಥೆ ಯು ಬೆಳಗಾವಿ ನಗರ ವಲಯದ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಕೋಚಿಂಗ್, ತರಬೇತಿ ನೀಡುವ ಮೂಲಕ ಶಿಕ್ಷಕರ ಬೋಧನಾ ಕೌಶಲ್ಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ, ಆತ್ಮವಿಶ್ವಾಸ ಅಭಿವೃದ್ಧಿಗಾಗಿ ಈ ರೀತಿಯ ಪ್ರದರ್ಶನವನ್ನು ಆಯೋಜಿಸಿದ್ದು ಮಕ್ಕಳ ಪ್ರತಿಭೆಯನ್ನು ಹೊರ ತರುವುದಕ್ಕಾಗಿ ಸೂಕ್ತ ವೇದಿಕೆಯನ್ನು ಒದಗಿಸಿದೆ ಎಂದು ಸಿ ಕೆ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ವರ್ಷಾ ಪಾರಚುರೆ, ಟೀಚರ್ ಇನ್ನೋವೇಟರ್ ಕಾರ್ಯಕ್ರಮದ ರಾಷ್ಟ್ರೀಯ ವ್ಯವಸ್ಥಾಪಕರು,ಸಿಕೆ ಸಂಸ್ಥೆ,ಮುಂಬೈ, ಶ್ರೀಮತಿ ಪೂಜಾ ಇಂದ್ರಜಿತ್ ಪಾಟೀಲ, ಮುನ್ಸಿಪಲ್ ಕಾರ್ಪೊರೇಟರ್, ವಾರ್ಡ್ ನಂಬರ್ 9 ಪುಲಬಾಗ ಗಲ್ಲಿ,ಇಂದ್ರಜಿತ್ ಪಾಟೀಲ,ಸಮಾಜ ಸೇವಕರು,ಶ್ರೀಮತಿ ಜ್ಯೋತಿ ಶಿಂಧೆ, ಬಿ ಆರ್ ಪಿ, ಪ್ರೌಢ ವಿಭಾಗ, ಶ್ರೀಮತಿ ಲಲಿತಾ ಕ್ಯಾಸನವರ್ ,ಬಿ ಆರ್ ಪಿ ಪ್ರಾಥಮಿಕ ವಿಭಾಗ ಬೆಳಗಾವಿ ನಗರ ವಲಯ ಹಾಗೂ ಬೆಳಗಾವಿ ನಗರ ವಲಯದ ಎಲ್ಲಾ ಸಿಆರ್ಸಿ ಗಳು, ಸಂಬಂಧಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರು,ಶಿಕ್ಷಕರು, ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು ಹಾಗೂ ಪಾಲಕರು ಭಾಗವಹಿಸಿ ಪ್ರದರ್ಶನದಲ್ಲಿ ಭಾಗವಹಿಸಿದ ಮಕ್ಕಳ ಕಾರ್ಯವನ್ನು ವೀಕ್ಷಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು. ಪ್ರದರ್ಶನದಲ್ಲಿ 650ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಮ್ಮ ಕಲಿಕೆಯನ್ನು ಪ್ರಸ್ತುತಪಡಿಸಿದರು