ಸೇಡಂ ಶಾಸಕ ರಾಜ್ಕುಮಾರ್ ಅವರ ಮೇಲೆ ಬ್ಲಾಕ್ ಮೇಲೆ ಆರೋಪಕ್ಕೆ ಇಂದು ಸ್ಪೋಟಕ ತಿರುವು ಪಡೆದಿದೆ.
ಇಂದು ಸೋಮವಾರ ಬೆಳಿಗ್ಗೆಯಷ್ಟೇ, ವಕೀಲ್ ಜಗದೀಶ್ ಅವರ ಸಾಮಾಜಿಕ ಜಾಲತಾಣದ ಖಾತೆಯ ಮೂಲಕ ಮಹಿಳೆ ಶಾಸಕರ ಮೇಲೆ ಮೋಸ ಮಾಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಳು.
ವಕೀಲ್ ಜಗದೀಶ್ ಅವರ ಮನೆ ಮುಂದೆ ಸುದ್ದಿಗೋಷ್ಠಿ ನಡೆಸಿದ ಮಹಿಳೆ, ಶಾಸಕರ ಆರೋಪಕ್ಕೆ ಸವಾಲ್ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹಿಳೆ, ಶಾಸಕ ರಾಜ್ಕುಮಾರ್ ತೆಲ್ಕೂರ್ ಅವರಿಗೆ ನನ್ನ ಜೊತೆ ಸಂಬಂಧ ಇಲ್ಲ ಎಂದು ಆಣೆ ಮಾಡಿ ಹೇಳಲಿ. ಅವರ ಮನೆ ದೇವ್ರು ವೀರಭದ್ರನ ಹೆಸರಲ್ಲಿ ಆಣೆ ಮಾಡಲಿ. ನಾನೇ ಜೈಲಿಗೆ ಹೋಗುತ್ತೇನೆ ಎಂದು ಮಹಿಳೆ ಸವಾಲ್ ಹಾಕಿದ್ದಾರೆ.
ಶಾಸಕ ತೇಲ್ಕೂರ್ ನನಗೆ ಬಾಲ್ಯದಿಂದ ಸ್ನೇಹಿತರು. ಶಾಸಕರ ಆರೋಪಕ್ಕೆ ಸಂಬಂಧಿಸಿದ ವಿಚಾರಣೆ ಹೆಸರಲ್ಲಿ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೇ, ಶಾಸಕರ ಬೆಂಬಲಿಗರು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದೀಗ ಮಹಿಳೆ ಪೊಲೀಸ್ ಕಮೀಷನರ್ಗೆ ದೂರು ಕೊಡಲು ಮುಂದಾಗಿದ್ದಾರೆ.
ಇಂದು ಬೆಳಿಗ್ಗೆಯಷ್ಟೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕ ರಾಜ್ಕುಮಾರ್ ತೆಲ್ಕೂರ್ ಅವರು, ಕಣ್ಣೀರು ಹಾಕುತ್ತಾ, ಮಹಿಳೆಗೂ ನನಗೂ ಸಂಬಂಧವಿಲ್ಲ. ಆಕೆ ಕೆಲ ದಿನಗಳ ಹಿಂದ ನನಗೆ ಹಣ ನೀಡಲು ಬ್ಲಾಕ್ ಮೇಲ್ ಮಾಡಿದ್ದಳು ಎಂದು ಆರೋಪಿಸಿದ್ದರು.