ಮಂಗಳೂರು: ನಗರವನ್ನು ‘ಮಂಗಳೂರು’ ಎಂದು ಬದಲಾವಣೆ ಮಾಡಿದ್ದರೂ ಇಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಾಖಲೆ, ಬೋರ್ಡ್ ಸಹಿತ ಸ್ವಾಗತ ಕಮಾನುಗಳಲ್ಲಿ ‘‘ಮ್ಯಾಂಗಲೋರ್’ ಎಂದೇ ಇತ್ತು. ಇದೀಗ ವಿಮಾನ ನಿಲ್ದಾಣ ಪ್ರಾಧಿಕಾರ ‘ಮಂಗಳೂರು’ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.
ಡಿ.1ರಿಂದ ಇದು ಜಾರಿಗೆ ಬರಲಿದೆ ಎಂದು ತಿಳಿದು ಬಂದಿದ್ದು, ‘ಮಂಗಳೂರು’ ಪದ ಬಳಕೆ ನಗರದಲ್ಲೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಗೂ ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರು ಬದಲಾವಣೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಈಗಾಗಲೇ ಮಂಗಳೂರು ನಗರದ ಹೆಸರನ್ನು ಮಂಗಳೂರು ಎಂದು ಬದಲಾಯಿಸಲಾಗಿದೆ. ಹಾಗಾಗಿ ವಿಮಾನ ನಿಲ್ದಾಣದ ಮಂಗಳೂರು ವಿಮಾನ ನಿಲ್ದಾಣದ ಹೆಸರಲ್ಲಿ Mangalore ಬದಲಾಗಿ Mangaluru ನಗರದಲ್ಲಿ ಎಲ್ಲಾ ಕಡೆ ಮಂಗಳೂರು ಪದ ಬಳಕೆ ಜಾರಿಯಲ್ಲಿದೆ. ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರನ್ನು ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿಕೆ ಬಿಡುಗಡೆ ಮಾಡಿದೆ.