ಪಂಚ ರಾಜ್ಯ ಚುನಾವಣೆ ನಡೆಯುತ್ತಿರುವ ಹೊತ್ತಲೇ ಕೇಂದ್ರ ಸರ್ಕಾರ ಜನತೆಗೆ ಬಿಗ್ ಶಾಕ್ ನೀಡಿದೆ. ವಾಣಿಜ್ಯ ಬಳಕೆಯ 19KG ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಒಮ್ಮೆಲೇ 105 ರೂಪಾಯಿ ಏರಿಕೆ ಮಾಡಿದೆ. ಪರಿಣಾಮ ದೆಹಲಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2000ರೂ. ದಾಟಿದೆ. ಐದು ಕೆಜಿ ತೂಕದ ಸಿಲಿಂಡರ್ ಬೆಲೆಯಲ್ಲಿಯೂ 27 ರೂಪಾಯಿ ಹೆಚ್ಚಾಗಿದೆ. ನೂತನ ದರ ತಕ್ಷಣದಿಂದಲೇ ಜಾರಿಗೆ ಬಂದಿದೆ.
ಆದರೆ, ಸಧ್ಯದ ಮಟ್ಟಿಗೆ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತೈಲ ಬೆಳೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ. ಚುನಾವಣೆ ಮುಗಿದ್ ಕೂಡಲೇ ಗೃಹ ಬಳಕೆ ಸಿಲಿಂಡರ್ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ಕೂಡಾ ಏರಿಕೆ ಕಾಣುವುದು ನಿಶ್ಚಿತ.