ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶ್ರೀ ಜಯಲಕ್ಷ್ಮಿ ಮಾತೆಯ 100 ನೇ ಜನ್ಮದಿನದ ಆಚರಣೆಯಂದು ಮಹಿಳೆಯರ ಆರೋಗ್ಯ ವೃದ್ದಿಗಾಗಿ ಆಯೋಜಿಸಲಾಗಿದ್ದ ಕಾರ್ ರ್ಯಾಲಿ ಹಾಗೂ ಆರೋಗ್ಯ ಶಿಬಿರಗಳು ಯಶಸ್ವಿಯಾಗಿ ನಡೆಯಿತು.
ರಾಮನಗರದ ಸೊಗಲ ಪ್ರೌಢ ಶಾಲೆಯಲ್ಲಿ ಸರಸ್ವತಿ ಪೂಜೆ ನೆರವೇರಿಸಿ ಬೆಳಿಗ್ಗೆ 10 ಗಂಟೆಗೆ ಶ್ರೀ ಜಯಲಕ್ಷ್ಮೀ ಮಾತೆಯ 100 ನೇ ಜನ್ಮದಿನವನ್ನು ಆಚರಿಸಲಾಯಿತು. ಜಯ ಕಾರ್ ರ್ಯಾಲಿಗೆ ಮಹಿಳಾ ದಕ್ಷತಾ ಸಮಿತಿ ಬೆಂಗಳೂರು ಮತ್ತು ಸೊಗಲದಲ್ಲಿ ಎಂಡ್ ಪಾಯಿಂಟ್ ಅಧ್ಯಕ್ಷೆ ಶ್ರೀಮತಿ ಶರಣ್ಯಾ ಹೆಗಡೆ ಅವರು ಚಾಲನೆ ನೀಡಿದರು. ಟೀಮ್ ಟ್ರಿಪ್ಜ್ಟರ್ಸ್ ಸಂಸ್ಥೆ ಮಹಿಳಾ ಕಾರ್ ರ್ಯಾಲಿಯನ್ನು ಆಯೋಜಿಸಿದೆ.
ಜಯ ಕಾರ್ ರ್ಯಾಲಿಯನ್ನು ಟ್ರಿಪ್ಜರ್ಸ್ ಸಂಸ್ಥೆಯ ವಕೀಲೆ ಅಂಬಿಕಾ ಸತ್ಯಮೂರ್ತಿ ಅವರು ಆಯೋಜಿಸಿದ್ದು, ಶ್ರೀ ಜಯಲಕ್ಷ್ಮಿ ಮಾತೆಗೆ ಸಮರ್ಪಿಸಿದ್ದಾರೆ. ಸೋಗಲ ಗ್ರಾಮದಲ್ಲಿ ಯಾವುದೇ ಆರೋಗ್ಯದ ಆರೈಕೆಗೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ಹೋಗಿಬೇಕಿದೆ. ಆದ್ದರಿಂದ ಈ ಗ್ರಾಮದಲ್ಲಿ ಅವಧೂತ ದತ್ತಪೀಠ ಮೈಸೂರು ಮತ್ತು ಅದರ ಬೆಂಗಳೂರು ಶಾಖೆಯು ವೈದ್ಯಕೀಯ ಶಿಬಿರವನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಕಿದ್ವಾಯಿ ಸ್ಮಾರಕ ಆಂಕೊಲಾಜಿ ಸಂಸ್ಥೆಯು ಕ್ಯಾನ್ಸರ್ ತಪಾಸಣೆ ಮತ್ತು ಪತ್ತೆ ಶಿಬಿರವನ್ನು ಈ ದಿನದ ಅಂಗವಾಗಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು 700 ಸದಸ್ಯರು ಊಟ ಮಾಡಿದರು. ಊಟದ ನಂತರ ಕಾರ್ಯಕ್ರಮ ನಡೆಯಿತು. ಪರಮ ಪೂಜ್ಯ ಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಗೆ ಗುರು ಮಾತಾ ಭವನದಿಂದ ಕುವೆಂಪು ರಂಗ ಮಂಟಪ್ಪ, ಸೊಗಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯವರೆಗೆ ಜಾನಪದ ನೃತ್ಯದ ಮೂಲಕ ಸ್ವಾಗತ ಮಾಡಿಕೊಳ್ಳಲಾಯಿತು. ಇವರು ಕಲಾ ಪ್ರದರ್ಶನ ಉದ್ಘಾಟನೆ ಮಾಡಿದರು.
ಅನಂತರ ಮಾತನಾಡಿದ ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಮಾರ್ಗದರ್ಶನ ಹಾಗೂ ಬೆಂಬಲ ನೀಡಿದರು. ಇವರಿಗೆ ಕಾರ್ಯಕ್ರಮದ ಪರವಾಗಿ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜೀವಮಾನದ ಸಾಧನೆ ಮಾಡಿದ ಹಿರಿಯ ಮಹಿಳೆಯರಿಗೆ ಸನ್ಮಾನ ಮತ್ತು ಶಿಕ್ಷಣ ಮತ್ತು ಸಬಲೀಕರಣ ಕ್ಷೇತ್ರದಲ್ಲಿ ಯುವಕರಿಗೆ ಬೆಂಬಲ ನೀಡಲಾಯಿತು. ಮಹಿಳೆಯರಾದ ಛಾಯಾ ಶ್ರೀವತ್ಸ, ಸುಭದ್ರಮ್ಮ, ಸರೋಜಾ ವಾಸುದೇವ ರಾವ್, ಆರ್ ವಿ ರಾವ್, ನಾಟ್ಯ ರತ್ನ ರೋಹಿಣಿ ಅನಂತ್ ಹಾಗೂ ಹೈಸ್ಕೂಲ್ ಹೆಡ್ ಮಾಸ್ಟರ್ ಮತ್ತು ತಂಡವನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸ್ವರಲ್ಯ ತಂಡದಿಂದ ನೃತ್ಯ ಪ್ರದರ್ಶನ ನಡೆಯಿತು. ಈ ತಂಡವನ್ನು ಗುರುಗಳಾದ ನಾಟ್ಯರತ್ನ ರೋಹಿನಿ ಅನಂತ್ ಅವರ ಸಂಯೋಜನೆ ಮಾಡಿದ್ದಾರೆ. ಹಾಗೆಯೇ, ಬಹುಮಾನ ವಿತರಣೆಯನ್ನೂ ಮಾಡಲಾಯಿತು. ಕಾರ್ ರ್ಯಾಲಿಯಲ್ಲಿ ಭಾಗವಹಿಸಿದವರಿಗೆ ಪ್ರಮಾಣಪತ್ರವನ್ನೂ ನೀಡಲಾಯಿತು. ಶ್ರೀ ಜಯಲಕ್ಷ್ಮಿ ಮಾತಾ ಕಾರ್ ಸ್ಟಿಕ್ಕರ್ಗಳನ್ನೂ ವೇದಿಕೆಯ ಮೇಲೆ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮಮಕ್ಕೆ ಬೆಂಬಲವಾಗಿ ನಿಂತ ಶ್ರೀಮತಿ, ವಸುಧಾ ನಾರಾಯಣ. ಸೊಗಲದ ಗುರು ಮಾತಾಭವನದಲ್ಲಿ ಅಡುಗೆ ಕೋಣೆ ಉದ್ಘಾಟನೆಗೆ ಸಿದ್ಧಾರ್ಥ ಗಣಪತಿ, ತಾಮಯ್ಯ. ಕಾರ್ ರ್ಯಾಲಿಯ ಉದ್ಘಾಟನಾ ದೀಪಾಲಂಕಾರ -ಶ್ರೀ ಸಿ ಎಸ್ ನರಶಿಮಾ,
ಶ್ರೀದತ್ ಮತ್ತು ಸ್ವಯಂ ಬೆಂಬಲ ನೀಡಿದ ಮೈಸೂರು ಮಾತೃಮಂಡಳಿ, ಬೆಂಗಳೂರು ಮಾತೃಮಂಡಳಿ ಹಾಗೂ SGSGBS ಟ್ರಸ್ಟ್, ಬೆಂಗಳೂರು ಇವರಿಗೆ ಕಾರ್ಯಕ್ರಮದ ಆಯೋಜಕರು ಧನ್ಯವಾದ ಅರ್ಪಿಸಿದರು.