ಪ್ಯಾನ್-ಇಂಡಿಯಾ ಚಲನಚಿತ್ರಕ್ಕಾಗಿ ನಿರ್ದೇಶಕ ಬೋಯಪತಿ ಶ್ರೀನು, ಹೀರೋ ರಾಮ್ ಪೋತಿನೇನಿ ಮತ್ತು ನಿರ್ಮಾಪಕ ಶ್ರೀನಿವಾಸ ಚಿತ್ತೂರಿ ಜೊತೆಗೂಡಿದ್ದಾರೆ. ಇದನ್ನು ಕ್ರೇಜಿ ಮಾಸ್ ಕಾಂಬಿನೇಷನ್ ಎಂದು ಹೇಳಲಾಗುತ್ತಿದೆ.
ಈ ಕಾಂಬಿನೇಷನ್ ನಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗಲಿರುವ ಚಿತ್ರದ ಬಗ್ಗೆ ಔಪಚಾರಿಕ ಪ್ರಕಟಣೆಯನ್ನು ಇಂದು ಮಾಡಲಾಗಿದೆ. ಶ್ರೀನಿವಾಸ ಚಿತ್ತೂರಿ ಅವರು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ನ ಅಡಿಯಲ್ಲಿ ಎರಡು ಬ್ಯಾಕ್ ಟು ಬ್ಯಾಕ್ ಬ್ಲಾಕ್ಬಸ್ಟರ್ಗಳ ನಂತರ, ರಾಮ್ ಪೋತಿನೇನಿ ಅಭಿನಯದ ಮತ್ತು ಎನ್ ಲಿಂಗುಸಾಮಿ ನಿರ್ದೇಶನದ ದಿ ವಾರಿಯರ್ ಅನ್ನು ನಿರ್ಮಿಸಿದ್ದಾರೆ.
ಬೋಯಪತಿ ಶ್ರೀನು ಅವರು ಇತ್ತೀಚಿಗೆ ಸೂಪರ್ ಹಿಟ್ ಆದ ನಂದಮೂರಿ ಬಾಲಕೃಷ್ಣ ಅಭಿನಯದ ಅಖಂಡ ಚಿತ್ರದಿಂದ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದಾರೆ. ರಾಮ್ ಪೋತಿನೇನಿ ತೆಲುಗು ಚಿತ್ರರಂಗದ ಕ್ರೇಜಿ ಹೀರೋಗಳಲ್ಲಿ ಒಬ್ಬರು.ಈ ಪ್ಯಾನ್-ಇಂಡಿಯನ್ ಪ್ರಾಜೆಕ್ಟ್ಗಾಗಿ ಈ ಮೂವರ ಒಟ್ಟುಗೂಡುವಿಕೆಯನ್ನು ದೊಡ್ಡ ಕಾಂಬಿನೇಷನ್ ಆಗಿ ನೋಡಲಾಗುತ್ತಿದೆ. ಇನ್ನೂ ಹೆಸರಿಡದ ಈ ಚಿತ್ರ ಅದ್ದೂರಿ ಬಜೆಟ್ನಲ್ಲಿ ತಯಾರಾಗಲಿದೆ.
ಚಿತ್ರದ ನಾಯಕಿ ಮತ್ತು ಇತರ ಪಾತ್ರವರ್ಗ ಮತ್ತು ಸಿಬ್ಬಂದಿ ಸೇರಿದಂತೆ ಚಿತ್ರದ ಕುರಿತು ಹೆಚ್ಚಿನ ವಿವರಗಳನ್ನು ಸದ್ಯದಲ್ಲಿಯೇ ಚಿತ್ರತಂಡ ಬಹಿರಂಗಪಡಿಸಲಿದೆ.