ಒಂದು ಮಾಸ್ ಚಿತ್ರದ ಟ್ರೈಲರ್ ಹೇಗಿರಬೇಕು ಅನ್ನುವುದಕ್ಕೆ ಇದೇ ಉದಾಹರಣೆ ನೋಡಿ. ಭೀಮ್ಲ ನಾಯಕ್ ಸಿನಿಮಾ ರಿಲೀಸ್ ಗೆ ಕೇವಲ ಎರಡು ದಿನ ಇರುವಾಗ ಮತ್ತೊಂದು ಪವರ್ ಫುಲ್ ಟ್ರೈಲರ್ ರಿಲೀಸ್ ಆಗಿದೆ.
ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ರಾಣಾ ದಗ್ಗುಬಾಟಿ ಅವರಿಗೆ ನಾನಾ ನೀನಾ ಎನ್ನುವಷ್ಟರ ಮಟ್ಟಿಗೆ ಡೈಲಾಗ್ ಇವೆ.ಇಬ್ಬರು ಸ್ಟಾರ್ ನಟರು ಪೈಪೋಟಿಗೆ ಬಿದ್ದಂತೆ ನಟಿಸಿರುವುದು ಟ್ರೈಲರ್ ನಲ್ಲಿ ಕಂಡುಬರುತ್ತದೆ.
ಅಹಂಕಾರ ಮತ್ತು ಆತ್ಮಗೌರವ ನಡುವಣ ಸಮರದಲ್ಲಿ ಗೆಲ್ಲೋದ್ಯಾವುದು ಎಂಬುದನ್ನು ನೋಡಲು ಶುಕ್ರವಾರದವರೆಗೂ ಕಾಯಬೇಕು ಅಷ್ಟೇ.