ಮೀನುಗಾರಿಕೆಗೆ ಹೋದ ಮೀನುಗಾರನನ್ನೆ ಮೀನು ಬಲಿ ಪಡೆದುಕೊಂಡ ಘಟನೆ ನಡೆದಿದೆ.
ವಿಶಾಖಪಟ್ಟಣದ ಕರಾವಳಿ ತೀರದಲ್ಲಿ ಈ ಘಟನೆ ನಡೆದಿದೆ. ವಿಶಾಖ ಜಿಲ್ಲೆಯ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಮೀನುಗಾರನೊಬ್ಬ ಸಾವನ್ನಪ್ಪಿದ್ದಾನೆ.
ಜೋಗಣ್ಣ ಎಂಬ ಮೀನುಗಾರ ಸಮುದ್ರದ ನಡುವೆ ಬಂದು ಬಲೆ ಬೀಸಿದ್ದಾನೆ. ಈ ವೇಳೆ ಬಲೆ ಸಿಕ್ಕಿ ಹಾಕಿಕೊಂಡಿದೆ. ಭಾರಿ ಪ್ರಮಾಣ ಮೀನುಗಳು ಸಿಕ್ಕಿರಬಹುದೆಂದುಕೊಂಡು ಎಳೆಯಲು ಪ್ರಯತ್ನಿಸಿದ್ದಾನೆ .ಬಲೆ ಸಿಕ್ಕಿಹಾಕಿಕೊಂಡ ಹಿನ್ನಲೆ ಬೋಟ್ ನ ಬದಿಗೆ ಬಂದು ನೋಡಿದಾಗ ಭಾರಿ ಗಾತ್ರದ ಮೀನು ಸಿಕ್ಕಿಬಿದ್ದಿದೆ.
ಅದು ಕೊಂಬು ಕೋಣ ಮೀನು. ಅದರ ಚೂಪಾದ ಕೊಂಬಿನಿಂದ ಜೋಗಣ್ಣನನ್ನ ಚುಚ್ಚಿ ಕೊಂದಿದೆ. ಈ ಮೀನು ಬಹಳ ಅಪಾಯಕಾರಿಯಾಗಿದ್ದು ಮನುಷ್ಯನ ಮೇಲೆಯೆ ದಾಳಿ ನಡೆಸಿ ಕೊಂದು ಹಾಕುತ್ತದೆ.