ಮೇಕೆದಾಟು ಅಣೆಕಟ್ಟೆ ನಿರ್ಮಾಣ ಯೋಜನೆಗೆ ಆಗ್ರಹಿಸಿ ‘ನೀರಿಗಾಗಿ ನಡಿಗೆ’ ಹೆಸರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿರುವ ಎರಡನೇ ಹಂತದ ಪಾದಯಾತ್ರೆಗೆ ಭಾನುವಾರ ರಾಮನಗರದಲ್ಲಿ ಚಾಲನೆ ನೀಡಲಾಗಿದೆ.
ರಾನಗರದ ಬಿಎಂ ರಸ್ತೆಯ ಕನಕಪುರ ವೃತ್ತದ ಬಳಿ ನಡೆದ ಬೃಹತ್ ಸಮಾರಂಭದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪಾದಯಾತ್ರೆಗೆ ನಿಶಾನೆ ತೋರಿದರು.
ರಾಮನಗರದಲ್ಲಿ ಇಂದು 2ನೇ ಹಂತದ ಐತಿಹಾಸಿಕ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ @RSSurjewala, ಶಾಸಕಾಂಗ ಪಕ್ಷದ ನಾಯಕರಾದ ಶ್ರೀ @Siddaramaiah, ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ @HariprasadBK2 ಸೇರಿದಂತೆ ಹಲವರು ಉಪಸ್ಥಿತರಿದ್ದರು.#Mekedatu #NammaNeeruNammaHakku pic.twitter.com/MaXHctX5pT
— DK Shivakumar (@DKShivakumar) February 27, 2022
ಜನವರಿ ರಿಂದ 19 ರವರಗೆ ಮೇಕೆದಾಟು ಪಾದಯಾತ್ರೆಯನ್ನು ಆಯೋಜಿಸಿ, ಮೇಕೆದಾಟು ಬಳಿಯ ಸಂಗಮದಿಂದ ಪಾದಯಾತ್ರೆಯನ್ನು ಕಾಂಗ್ರೆಸ್ ಆರಂಭಿಸಿತ್ತಾದರೂ, ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿ ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ನಾಲ್ಕೇ ದಿನಕ್ಕೆ ರಾಮನಗರದಲ್ಲಿ ಮೊಟಕಾಗಿತ್ತು.
ಇದೀಗ ಕೊರೋನಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಮನಗರದಿಂದ ಪಾದಯಾತ್ರೆಯನ್ನು ಪುನರಾರಂಭಿಸಿದೆ. ಒಟ್ಟು 79.8 ಕಿಮೀ ದೂರ ಕಾಂಗ್ರೆಸ್ಸಿಗರು ಹೆಜ್ಜೆ ಹಾಕಲಿದ್ದಾರೆ.