ಆಡು ಮುಟ್ಟದ ಸೊಪ್ಪಿಲ್ಲ ಇವರು ಮಾಡದ ಪಾತ್ರಗಳಿಲ್ಲ, ಇವರ ಹೆಸರೆಂದರೆ ಸಿನಿಮಾರಂಗಕ್ಕೆ ಒಂದು ಶಕ್ತಿ,ಕನ್ನಡಿಗರ ಗರ್ವ,ಸ್ಫೂರ್ತಿಯ ಸೆಲೆ,ಕರುನಾಡಿನ ಜನುಮದಲ್ಲಿ ಎಂದಿಗೂ ರಾರಾಜಿಸುತ್ತಿರುವ ಇವರು,ಹಾಡಲು ನಿಂತರೆ ಗಾನಗಂಧರ್ವ,ಅವರೇ ನಮ್ಮ ಮತ್ತು ಕರ್ನಾಟಕದ ಸ್ವತ್ತು ನಟ ಸಾರ್ವಭೌಮ ಡಾ|| ರಾಜಕುಮಾರ್.
ಅವರನ್ನು ಪರೋಕ್ಷವಾಗಿ ಕನ್ನಡದ ಮೇಷ್ಟ್ರು ಎಂದೇ ಕರೆಯಬಹುದು ಏಕೆಂದರೆ ಭಾಷೆಯ ಬಳಕೆ ಮತ್ತು ಉಚ್ಚಾರಣೆಯನ್ನು ಇವರಿಂದ ಮತ್ತು ಇವರ ಸಿನಿಮಾದಿಂದ ಕಲಿಯಬಹುದು ಹಾಗೆ ಒಳ್ಳೆಯ ಕುಟುಂಬ ಸದಸ್ಯ ನಾಗುವುದು,ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ವ್ಯಕ್ತಿಯ ವರ್ತನೆ ಹೇಗಿರಬೇಕೆಂಬುದನ್ನು,ಇವರ ಸಿನಿಮಾ ಮತ್ತು ಜೀವನದಿಂದ ಕಲಿಯಬಹುದಾಗಿದೆ.
https://www.youtube.com/watch?v=6orhbJ-Oaz8
ರಾಜ್ ಅವರ ಪ್ರತಿಯೊಂದು ಸಿನಿಮಾದಲ್ಲೂ ಒಂದು ಸಮಾಜಮುಖಿಯಾದ ಸಂದೇಶವಿರುತ್ತಿತ್ತು. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅಭಿಮಾನಿಗಳನ್ನು ದೇವರು ಎಂದಿದ್ದು ರಾಜಕುಮಾರ್ ರವರು ಮಾತ್ರ. ಒಬ್ಬ ಮನುಷ್ಯನ ಮೇಲೆ ರಾಜ್ ರವರ ಸಿನಿಮಾ ಹೇಗೆ ಪರಿಣಾಮ ಮತ್ತು ಬದಲಾವಣೆ ತರಬಲ್ಲದು ಎಂಬ ಮುಖ್ಯ ಆಶಯದೊಂದಿಗೆ ರಾಜ್ THE INSPIRATION ಎಂಬ ನಾಟಕವನ್ನು ಮೇ 20 ಶುಕ್ರವಾರದಂದು ಸಂಜೆ 7ಕ್ಕೆ ಕಿರು ರಂಗಮಂದಿರದಲ್ಲಿ (ಕಲಾಮಂದಿರ ಆವರಣ) ಪ್ರದರ್ಶನಗೊಳ್ಳಲಿದೆ.ಇದು ಪ್ರಯೋಗ ಮೈಸೂರು ತಂಡ ಅಭಿನಯಿಸುತ್ತಿರುವ ಮೊದಲ ನಾಟಕ.
ರಂಗರೂಪ : ಸಂಜಯ್
ಪರಿಕಲ್ಪನೆ ಮತ್ತು ನಿರ್ದೇಶನ : ಪ್ರವೀಣ್ ಬೆಳ್ಳಿ
ರಂಗಸಜ್ಜಿಕೆ ಮತ್ತು ಪರಿಕರಗಳು : ಶ್ರೀಕಾಂತ್ ಎಸ್ ನೃತ್ಯ ಸಂಯೋಜನೆ- ಕಾರ್ತಿಕ ಉಪಮನ್ಯು