ಸಾಂಸ್ಕೃತಿಕ ನಗರಿ ಮೈಸೂರಿಗೆ ರೋಬೋ ಸುಂದರಿಯೊಬ್ಬಳು ಕಾಲಿಟ್ಟಿದ್ದಾಳೆ. ಈ ರೋಬೊ ಚೆಲುವೆ ಮೈಸೂರಿನ ಸಿದ್ದಾರ್ಥ ಹೋಟೆಲ್ನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡಲಿದ್ದಾಳೆ.
ಮೈಸೂರಿನ ಸಿದ್ದಾರ್ಥ್ ಗ್ರೂಪ್ಸ್ ಚೇರ್ಮನ್ ಪಿ.ವಿ ಗಿರಿಯವರು ಹೋಟೆಲ್ನಲ್ಲಿ ಸೇವೆ ನೀಡಲು ರೋಬೊ ಸುಂದರಿಯನ್ನು ಖರೀದಿಸಿ ತಂದಿದ್ದಾರೆ. ಇದೀಗ, ಇಡೀ ಮೈಸೂರಿನ ಆಕರ್ಷಣೆಯ ಕೇಂದ್ರಬಿಂದು ಈ ರೋಬೊ ಚೆಲುವೆಯಾಗಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಪಿ.ವಿ.ಗಿರಿಯವರು, ಕೋರೋನಾ ಸಂದರ್ಭದಲ್ಲಿ ನಮ್ಮ ಹೋಟೆಲ್ ನಲ್ಲಿ ಸರ್ವರ್ ಕೊರತೆ ಇತ್ತು. ಉತ್ತಮವಾಗಿ ಗ್ರಾಹಕರಿಗೆ ಸೇವೆ ನೀಡಲು ಆಗುತ್ತಿಲ್ಲರಲಿಲ್ಲ. ಇದೀಗ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಹೊಸ ಪ್ರಯತ್ನ ಮಾಡಿದ್ದೇವೆ. ರೋಬೊದಿಂದ ಗ್ರಾಹಕರು ನಮ್ಮ ಹೋಟೆಲ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಈಗ ಒಂದು ರೋಬೋವನ್ನು ದೆಹಲಿಯಿಂದ ತರಿಸಲಾಗಿದೆ. ಇನ್ನೂ ಆರು ರೋಬೋಗಳನ್ನು ತರಿಸುತ್ತೇವೆ. ನಾವು ಮಾಡಿರುವ ಹೊಸ ಪ್ರಯತ್ನ ಜನರಿಗೆ ಇಷ್ಟವಾಗುತ್ತದೆ ಎಂದಿದ್ದಾರೆ.
ಸಿದ್ದಾರ್ಥ್ ಹೋಟೆಲ್ನ ಈ ರೋಬೊ ಚೆಲುವೆ ಹೋಟೆಲ್ ಸಪ್ಲೇಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಮೈಸೂರು ರೇಷ್ಮೆ ಸೀರೆ ತೊಟ್ಟ ಈ ಚೆಲುವೆ ಗ್ರಾಹಕರಿಗೆ ಊಟ, ತಿಂಡಿಯನ್ನು ಅಡುಗೆ ಕೋಟಣೆಯಿಂದ ತಂದು ನೀಡಲಿದ್ದಾಳೆ.
ಈ ರೋಬೋ ಚೆಲುವೆಯನ್ನು ತರಿಸಲು 2.5 ಲಕ್ಷ ರೂ.ವೆಚ್ಚವಾಗಿದೆ. ಈ ರೋಬೊ ಬ್ಯಾಟರಿ ಚಾಲಿತವಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ 8 ಗಂಟೆಗಳ ಕಾಲ ಕೆಲಸ ನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ರೋಬೋ ಮೈಸೂರಿನ ಪ್ರತಿಷ್ಠಿತ ಹೋಟೆಲ್ ಗೆ ಬರಲಿವೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣಗೌಡ ಹೇಳಿದ್ದಾರೆ.