ಹೆಚ್ಚುವರಿ ಹಣ ಕೊಡುವ ಅಗತ್ಯವಿಲ್ಲ. ನೀವು ಜೀ5 ಚಂದಾದಾರಾಗಿದ್ದರೇ ಸಾಕು RRR ಸಿನಿಮಾ ನೋಡಬಹುದು
ಎಸ್ ಎಸ್ ರಾಜಮೌಳಿ ನಿರ್ದೇಶಕದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ RRR ಇದೇ 20ರಂದು ಜೀ5 ಒಟಿಟಿಗೆ ಲಗ್ಗೆ ಇಡ್ತಿದೆ. ವಿಶ್ವ ಬಾಕ್ಸಾಫೀಸ್ನಲ್ಲಿ ನಲ್ಲಿ ನಯಾ ರೆಕಾರ್ಡ್ ಬರೆದಿದ್ದ ತ್ರಿಬಲ್ ಆರ್ ಸಿನಿಮಾದಲ್ಲಿ ರಾಮ್-ಭೀಮ್ ಖದರ್ ನಲ್ಲಿ ರಾಮ್ಚರಣ್ ಹಾಗೂ ಜೂ.ಎನ್ಟಿಆರ್ ಜೋಡಿ ಕಮಾಲ್ ಮಾಡಿತ್ತು. ಬರೋಬ್ಬರಿ 1000ಕ್ಕೂ ಹೆಚ್ಚು ಕೋಟಿ ಹಣ ಲೂಟಿ ಮಾಡಿರುವ ರೌದ್ರ, ರಣ, ರುಧೀರ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಲಾಗದವರು ಈಗ ಮನೆಯಲ್ಲಿಯೇ ಕುಳಿತು ನೋಡುವ ಅವಕಾಶವನ್ನು ಜೀ5 ಒಟಿಟಿಗೆ ಒದಗಿಸಿದೆ.
ಎಕ್ಸ್ಟ್ರಾ ದುಡ್ಡು ಕೊಡುವ ಆಗಿಲ್ಲ
ಜೀ5 ಅಂಗಳಕ್ಕೆ ಆರ್ ಆರ್ ಆರ್ ಸಿನಿಮಾ ಬಿಡುಗಡೆಯೇನು ಆಗ್ತಿದೆ. ಆದ್ರೆ ಇದಕ್ಕೂ ಮುನ್ನ ಜೀ5 ಒಂದು ಟ್ವಿಸ್ಟ್ ಇಟ್ಟಿತ್ತು. ಈಗಾಗಲೇ ಒಟಿಟಿಯ ಚಂದಾದಾರಿಕೆ ಹೊಂದಿದ್ದರೂ ಈ ಸಿನಿಮಾವನ್ನು ವೀಕ್ಷಿಸಲು ಪ್ರತ್ಯೇಕವಾಗಿ ಹಣ ಪಾವತಿಸಬೇಕಾಗಿದೆ. ಹೀಗಾಗಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲವನ್ನೂ ಅರಿತ ಜೀ5 ಈ ಅಪ್ಷನ್ ನ್ನು ತೆಗೆದು ಹಾಕಿದೆ. ಜೀ5 ಒಟಿಟಿಯಲ್ಲಿ ಚಂದಾದಾರರದ ಎಲ್ಲರೂ ಸಿನಿಮಾ ನೋಡುವ ಅವಕಾಶ ನೀಡಿದೆ.
ಯಂಗ್ ಟೈಗರ್ ಬರ್ತ್ ಡೇ ದಿನ RRR ಅಬ್ಬರ
ಆರ್ ಆರ್ ಆರ್ ಸಿನಿಮಾ ರಿಲೀಸ್ ಆಗಿ ಐವತ್ತಕ್ಕೂ ಹೆಚ್ಚು ದಿನ ಕಳೆದಿದ್ದು, ಇದೇ 20ರಂದು ಯಂಗ್ ಟೈಗರ್ ಬರ್ತ್ ಡೇ ದಿನವೇ ಜೀ5 ಒಟಿಟಿಯಲ್ಲಿ ಆರ್ ಆರ್ ಆರ್ ಅಬ್ಬರ ಶುರುವಾಗಲಿದೆ. ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಭಾಷೆಯಲ್ಲಿ ರಾಜಮೌಳಿಯ ದೃಶ್ಯವೈಭೋಗ ಪ್ರದರ್ಶನವಾಗಲಿದೆ. ಇತ್ತೀಚೆಗೆ ಜೀ5 ರಿಲೀಸ್ ಮಾಡಿದ್ದ ಸ್ಪೆಷಲ್ ಟ್ರೇಲರ್ ಗೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ಜೀ5 ಒಟಿಟಿ ಇಂಗ್ಲಿಷ್ ಸಬ್ ಟೈಟಲ್ ಬಳಸಿ RRR ಸಿನಿಮಾ ರಿಲೀಸ್ ಮಾಡ್ತಿದೆ.