ರಂಗಭೂಮಿ ಕಲಾವಿದೆಯೊಬ್ಬರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಮಾರ್ಚ್ 18ರಂದು ಬೆಂಗಳೂರು ನಂದಿನಿ ಲೇಔಟ್ನ ಗಣೇಶ ಬ್ಲಾಕ್ನಲ್ಲಿ ನಡೆದಿದೆ.
ದೇವಿ ಆ್ಯಸಿಡ್ ದಾಳಿಗೊಳಗಾದ ರಂಗಭೂಮಿ ಕಲಾವಿದೆ. ಮನೆಯ ಜಗಲಿಯ ಮೇಲೆ ಮಲಗಿದ್ದ ವೇಳೆ ಆ್ಯಸಿಡ್ ದಾಳಿ ನಡೆಸಲಾಗಿದೆ. ಈ ಹಿಂದೆ ಬಿಎಂಟಿಸಿಯಲ್ಲಿ ಕೆಲಸ ನಿರ್ವಹಿಸಿದ್ದ ದೇವಿ, ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಟಿಸಿ ನಿರ್ವಾಹಕ ಹುದ್ದೆ ತೊರೆದಿದ್ದರು. ಇದೀಗ ರಂಗಭೂಮಿಯ ಸಹ ಕಲಾವಿದರೇ ಆ್ಯಸಿಡ್ ದಾಳಿ ನಡೆಸಿರುವುದು ಬಯಲಿಗೆ ಬಂದಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.
ರಮೇಶ್, ಸ್ವಾತಿ, ಯೋಗೇಶ್ ಬಂಧಿತರು. ಸ್ವಾತಿ ಎಂಬಾಕೆ ಆರೋಪಿ ರಮೇಶ್ಗೆ ಆ್ಯಸಿಡ್ ತಂದು ಕೊಟ್ಟು ಕೃತ್ಯ ನಡೆಸುವಂತೆ ಪ್ರಚೋದನೆ ನೀಡಿರುವುದಾಗಿ ತಿಳಿದುಬಂದಿದೆ. ಈ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.