ರಷ್ಯಾ-ಉಕ್ರೇನ್ ನಡುವಿನ ಯುದ್ಧದಲ್ಲಿ ಶೆಲ್ ದಾಳಿಗೆ ಬಲಿಯಾಗಿದ್ದ ಕನ್ನಡಿಗ ನವೀನ್ (22) ಮೃತದೇಹವನ್ನು ಭಾನುವಾರ ಬೆಳಿಗ್ಗೆ 3 ಗಂಟೆಗೆ ಬೆಂಗಳೂರಿಗೆ ತರಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಭಾನುವಾರದಂದು(ಮಾರ್ಚ್ 20) ನವೀನ್ ಪಾರ್ಥೀವ ಶರೀರವನ್ನು ತರಲಾಗುತ್ತಿದ್ದು, ಅಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದೆ ಎಂದು ತಿಳಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿ ಚಳಗೇರಿಯ ನವೀನ್ ಉಕ್ರೇನ್ನ ಖಾರ್ಕಿವ್ ನಗರದಲ್ಲಿ 4 ನೇ ವರ್ಷದ ವೈದ್ಯಕೀಯ ಪದವಿ ಓದುತ್ತಿದ್ದ. ಯುದ್ಧದ ಸಮಯದಲ್ಲಿ ಸೂಪರ್ ಮಾರ್ಕೆಟ್ಗೆ ಹೋಗಿದ್ದಾಗ ರಷ್ಯಾದ ಶೆಲ್ ದಾಳಿಗೆ ಬಲಿಯಾಗಿದ್ದ.