ಮದರಸಾ ಶಾಲೆಗಳನ್ನ ಬ್ಯಾನ್ ಮಾಡಬೇಕು. ಅಲ್ಲಿ ಎಳೆ ಮಕ್ಕಳಿಗೆ ದೇಶ ದ್ರೋಹದ ಪಾಠ ಮಾಡಲಾಗುತ್ತದೆ. ಅವರು ಮುಂದೆ ಭಾರತ್ ಮಾತಾ ಕೀ ಜೈ ಅನ್ನಲ್ಲ ಎಂದು ಹೊನ್ನಾಳಿಯ ಬಿಜೆಪಿ ಶಾಸಕ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರು ವಿವಾದಾತ್ಮಕೆ ಹೇಳಿಕೆ ನೀಡಿದ್ದಾರೆ.
ಇಂದು ಹೊನ್ನಾಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆಗಳು ಇಲ್ಲವಾ? ಮದರಸಾದಲ್ಲಿ ಎನು ಪಾಠ ಮಾಡಲಾಗುತ್ತದೆ? ಮುಖ್ಯಮಂತ್ರಿಗಳು ಮದರಸಾಗಳನ್ನ ಬ್ಯಾನ್ ಮಾಡಬೇಕು. ಹಿಜಾಬ್ ವಿವಾದ ಹುಟ್ಟಿಸಿದ್ದು ಜಮೀರ್ ಅಹ್ಮದ್, ಖಾದರ್ ಹಾಗೂ ಇತರ ದೇಶ ದ್ರೋಹಿ ಸಂಘಟನೆಗಳು. ರಾಜ್ಯದಲ್ಲಿ ಈಗಾಗಲೇ ಹಿಜಾಬ್ ಬಗ್ಗೆ ಹೈಕೋರ್ಟ್ ತೀರ್ಪು ನೀಡಿದೆ. ಈ ನೆಲದ ಕಾನೂನಿಗೆ ಪ್ರತಿಯೊಬ್ಬರು ಬೆಲೆ ಕೊಡಬೇಕು. ಆದರೂ ಸದನದಲ್ಲಿ ಕಾಂಗ್ರೆಸ್ ನವರು ಹಿಜಾಬ್ ಪ್ರಸ್ತಾಪ ಮಾಡಿದ್ದಾರೆ. ಅದರ ಪರವಾಗಿ ಮಾತಾಡಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ.
ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರಕ್ಕೆ ಬಂದ್ರೆ ಎಸ್ಸಿ ಎಸ್ಟಿ ಮೀಸಲಾತಿ ಕಿತ್ತಾಕುತ್ತೇವೆ ಎಂದು ಹೇಳಿದ್ದರು. ಆದರೂ ನಾವು ಮುಂದುವರೆಸಿದ್ದೇವೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯರ ವಿವಾದಿತ ಹೇಳಿಕೆ ನೀಡಿದ್ದಾರೆ. ನಾನು ಜಾತ್ಯಾತೀತ ವ್ಯಕ್ತಿ. ಅಂಬೇಡ್ಕರ್ ಸಂವಿಧಾನದ ಸಂದೇಶದಂತೆ ಬದುಕು ಸಾಗಿಸುತ್ತಿದ್ದೇನೆ. ನನ್ನ ಮಗಳ ಹೆಸರಿನಲ್ಲಿ ಪರಿಶಿಷ್ಟ ಜಾತಿ ಪ್ರಮಾಣ ವಿಚಾರದಲ್ಲಿ ತಪ್ಪು ಮಾಡಿಲ್ಲ. ವಿಧಾನ ಸಭೆಯಲ್ಲಿ ಈ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ರೇಣುಕಾಚಾರ್ಯ ಜಾತಿ ಪ್ರಮಾಣ ಪತ್ರ ಬಗ್ಗೆ ಒಪ್ಪಿಕೊಂಡಿದ್ದಾರೆ. ದೂರು ಕೊಡಲಿ ತಪ್ಪು ಮಾಡಿದ್ರೆ ಶಿಕ್ಷೆ ಆಗುತ್ತದೆ. ನಾನು ತಪ್ಪು ಮಾಡಿಲ್ಲ. ಮಗಳ ಹೆಸರಿನಲ್ಲಿ ಯಾವುದೇ ಸೌಲಭ್ಯ ಪಡೆದಿಲ್ಲ. ಯಾವುದೇ ಸವಾಲು ಎದುರಿಸಲು ಸಿದ್ದ ಎಂದೂ ರೇಣುಕಾಚಾರ್ಯ ಹೇಳಿದ್ದಾರೆ.
https://youtu.be/ihOEoNnfIT8