ಸಿಎಂ ಬಸವರಾಜ ಬೊಮ್ಮಾಯಿಯವರು ಇಂದು ಮಂಡಿಸುತ್ತಿರುವ ತಮ್ಮ ಚೊಚ್ಚಲ ಬಜೆಟ್ನಲ್ಲಿ ರಾಜ್ಯದ ಅಂಗನವಾಡಿ ಸಹಾಯಕಿಯರಿಗೆ ಹಾಗೂ ಬಿಸಿಯೂಟ ತಯಾರಕರಿಗೆ ಗೌರವ ಧನವನ್ನು ಹೆಚ್ಚಿಸಿದ್ದಾರೆ.
10 ವರ್ಷಗಳ ಹೆಚ್ಚು ಅವಧಿಯಲ್ಲಿ ಕೆಲಸ ನಿರ್ವಹಿಸಿರುವವರಿಗೆ 2 ಸಾವಿರ ರೂ. 5 ವರ್ಷಕ್ಕಿಂತ ಹೆಚ್ಚಿನ ಅವಧಿ ಕೆಲಸ ನಿರ್ವಹಿಸಿರುವ ಸಹಾಯಕಿಯರಿಗೆ 1,500 ರೂ. ಹಾಗೂ 5 ವರ್ಷಕ್ಕಿಂತ ಕೆಳಗಿನ ವರ್ಷಗಳ ಅಂಗನವಾಡಿ ಸಹಾಯಕಿಯರಿಗೆ 1 ಸಾವಿರ ರೂ.ಗೌರವ ಧನ ಹೆಚ್ಚಿಸಿ ಸಿಎಂ ಬೊಮ್ಮಾಯಿ ಘೋಷಿಸಿದ್ದಾರೆ.
ಸರ್ಕಾರಿ ಶಾಲೆಗಳು ಹಾಗೂ ಹಾಸ್ಟೆಲ್ಗಳ ಬಿಸಿಯೂಟ ತಯಾರಕರಿಗೆ 1 ಸಾವಿರ ರೂ. ಗೌರವಧನ ಹೆಚ್ಚಿಸಲಾಗಿದೆ.