ತುಳುವಿನ ಹಾಸ್ಯಮಯ ಸಾಂಸಾರಿಕ ಹೊಸ ನಾಟಕ ‘ಪನೊಡಾಯಿನಕುಲು ಪಂತ್ ಜೆರ್’ ನಾಟಕದ ಮುಹೂರ್ತವು ಶನಿವಾರದಂದು ನಡೆಯಿತು.
ಶ್ರೀ ಶಾಸ್ತಾರ ಕಲಾವಿದೆರ್ ಶಾಸ್ತಾವು ನಾಟಕ ತಂಡವು ಶ್ರೀ ವಿಜಯನಾಥ ವಿಠಲ ಶೆಟ್ಟಿಯವರ ಮಾರ್ಗದರ್ಶನದೊಂದಿಗೆ ಶ್ರೀ ಹೇಮಚಂದ್ರ ಶೆಟ್ಟಿ ಇವರ ಸಾರಥ್ಯದಲ್ಲಿ ರಂಗಭೂಮಿ ಕಲಾಸೇವೆಗೆ ಹೆಜ್ಜೆಯಿರಿಸಿದ್ದು, ತುಳು ಹಾಸ್ಯಮಯ ಸಾಂಸಾರಿಕ ಹೊಸ ನಾಟಕ ‘ಪನೊಡಾಯಿನಕುಲು ಪಂತ್ ಜೆರ್’ ಇದರ ಮುಹೂರ್ತವು ಶ್ರೀ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನದಲ್ಲಿ 12/2/2022 ಶನಿವಾರದಂದು ಜರಗಿತು.
ಈ ಸಂಧರ್ಭದಲ್ಲಿ ತಂಡದ ನಿರ್ಮಾಪಕರು ಶ್ರೀ ಹೇಮಚಂದ್ರ ಶೆಟ್ಟಿ ಶಾಸ್ತಾವು ˌ ಸಂಚಾಲಕರು ನಿರ್ಮಲ್ ಕುಮಾರ್ ಜೈನ್ ಪದ್ಮುಂಜ ˌ ತಂಡ ಸದಸ್ಯರಾದ ರಂಗಬೊಳ್ಳಿ ಮಾಧವ ಇರುವೈಲ್ ˌ ತುಳುನಾಡ ಬೊಳ್ಳಿ ಪದ್ಮನಾಭ ಮರಕಡ ˌ ಶಿವಕುಮಾರ್ ಕಾವೂರು ˌ ಪವನ್ ಮಂಜೇಶ್ವರ , ಕಿಶೋರ್, ರತ್ನಾಕರ ಉಪಸ್ಥಿತರಿದ್ದರು.